Spandana College ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿçÃಜಿ ಜಯಂತಿ ಆಚರಣೆ
ಇಳಕಲ್ : ಇಲ್ಲಿಯ ಸ್ಪಂದನ ಪದವಿ ಪೂರ್ವ ವಿಜ್ಞಾನ ಕಾಲೇಜನಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಅಮರೇಶ ಕೌದಿ ಅವರು ಮಾತನಾಡಿ ಗಾಂಧೀಜಿಯವರ ಮೌಲ್ಯಗಳಾದ ಸತ್ಯ,ಅಹಿಂಸೆ, ಶಾಂತಿ ಹಾಗೂ ಸಹಬಾಳ್ವೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯೋಗ್ಯ ರೀತಿಯಲ್ಲಿ ಜೀವನ ನಡೆಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ಉಪನ್ಯಾಸಕರಾದ ರವಿ ಎಲ್ ಅರಸಿದ್ದಿ, ಬಸವರಾಜ ಸಿ ತುಂಬಗಿ, ವೀರೇಶ ಡಿ ಬಾಚೇನಹಳ್ಳಿ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಲಕ್ಷ್ಮಣ ಡಿ ಹಾದಿಮನಿ ಸ್ವಾಗತಿಸಿ, ಸಮೀರ್ ಸರ್ಕಾವಸ್ ವಂದಿಸಿ ಪ್ರಕಾಶ ಎಸ್ ನಾಲತವಾಡ ನಿರೂಪಿಸಿದರು.