Balkundi Gram Panchayat ಬಲಕುಂದಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಶ್ರೀನಿವಾಸ ರಾಠೋಡ ಆಯ್ಕೆ
ಇಳಕಲ್ : ತಾಲೂಕಿನ ಬಲಕುಂದಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ
ಶ್ರೀನಿವಾಸ ದೇವಪ್ಪ ರಾಠೋಡ ಎಂಟು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಮಂಗಳವಾರದAದು ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ಆರು
ನಾಮಪತ್ರಗಳನ್ನು ಸಲ್ಲಿಸಲಾಗಿತ್ತು ಅದರಲ್ಲಿ ಒಂದು ನಾಮಪತ್ರ ತಿರಸ್ಕಾರಗೊಂಡಿತು ನಂತರ ಇಬ್ಬರು
ನಾಮಪತ್ರ ವಾಪಸ್ಸು ಪಡೆದಾಗ ಚುನಾವಣಾ ಕಣದಲ್ಲಿ ಮೂವರು ಉಳಿದರು.
ರಮೇಶ ಜಾಧವ ಎರಡು ಮತ, ದೊಡ್ಡಪ್ಪ ಕಾರಭಾರಿ ನಾಲ್ಕು ಮತ ಪಡೆದರೆ ಶ್ರೀನಿವಾಸ ರಾಠೋಡ
ಎಂಟು ಮತಗಳಿಸಿ ವಿಜಯಶಾಲಿಗಳಾದರು. ಹಿಂದಿನ ಅಧ್ಯಕ್ಷ ಮಹಾಂತೇಶ ವಡ್ಡರ ನಿಧನದಿಂದಾಗಿ
ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಶಾಸಕ ವಿಜಯಾನಂದ ಕಾಶಪ್ಪನವರ ನಿವಾಸದಲ್ಲಿ
ನೂತನ ಅಧ್ಯಕ್ಷರನ್ನು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಮಹಾಂತೇಶ ನರಗುಂದ, ತುಂಬ
ಪಿಕೆಪಿಎಸ್‌ಅಧ್ಯಕ್ಷ ಬಸವರಾಜ ಜಾಲಿಹಾಳ ಮತ್ತು ಕಾಂಗ್ರೆಸ್ ಮುಖಂಡರು ಸತ್ಕರಿಸಿದರು.