ಇಳಕಲ್‌ದಲ್ಲಿ ರಾತ್ರಿ ಸಮಯದಲ್ಲಿ ಮನುಷ್ಯನ ಮೇಲೆ ದಾಳಿ ನಡೆಸಿದ ಬೀದಿ ನಾಯಿಗಳು
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಗಾಂಧಿ ಚೌಕ ಹತ್ತಿರದ ಅಕ್ಕಿ ಮೆಡಿಕಲ್ ಬಳಿ ರಾತ್ರಿ ವೇಳೆಯಲ್ಲಿ ಬೀದಿ ನಾಯಿಗಳ ಹಾವಳಿಗೆ ಜನರು ಸುಸ್ತಾಗಿದ್ದಾರೆ.
ಅದರಲ್ಲಿಯೂ ಓರ್ವ ವ್ಯಕ್ತಿಯನ್ನು ನಾಲ್ಕೈದು ನಾಯಿಗಳು ಸೇರಿಕೊಂಡು ರಸ್ತೆಯಲ್ಲಿ ಕೆಡವಿ ಕಚ್ಚುತ್ತಿದ್ದ ದೃಶ್ಯವನ್ನು ಸಿಸಿ ಕ್ಯಾಮರಾದಲ್ಲಿ ಚಿತ್ರೀಕರಣಗೊಂಡಿದೆ.
ನಾಯಿಗಳು ವ್ಯಕ್ತಿಯನ್ನು ಕೆಳಗೆ ಕೆಡವಿ ಕಚ್ಚಾಡುತ್ತಿದ್ದು ಇದರಿಂದಾಗಿ ರಾತ್ರಿ ವೇಳೆಯಲ್ಲಿ ಬೇರೆ ಊರುಗಳಿಗೆ ಹೇಗೆ ಮರಳಿ ಮನೆ ಸೇರುವದು ಎಂಬ ಚಿಂತೆಯಲ್ಲಿ ಜನರು ಒದ್ದಾಡುತ್ತಿದ್ದಾರೆ.