Students trapped in Ilakal Gudur bus ಇಳಕಲ್ ಗೂಡೂರ ಬಸ್‌ಗೆ ಜೋತು ಬಿದ್ದ ವಿದ್ಯಾರ್ಥಿಗಳು
ಬಾಗಲಕೋಟ : ಜಿಲ್ಲೆಯ ಇಳಕಲ್ ಬಸ್ ಘಟಕದಿಂದ ಇಳಕಲ್ ಗೂಡೂರ ಬಸ್‌ಗೆ ತುಂಬಿ ತುಳುಕಿದರೂ
ಕೂಡಾ ವಿದ್ಯಾರ್ಥಿಗಳು ಎರಡು ಬಾಗಿಲಿನಲ್ಲಿ ಜೋತು ಬಿದ್ದ ಸಂಚಾರ ಮಾಡುತ್ತಿದ್ದ ದೃಶ್ಯ ಜೂನ್ ೧೯
ಮಧ್ಯಾಹ್ನ ೩ ಗಂಟೆಯ ಸಂದರ್ಭ ನಡೆದಿದೆ.
ಎರಡು ಬಾಗಿಲಿನಲ್ಲಿ ಜೋತು ಬಿದ್ದಿರುವ ವಿದ್ಯಾರ್ಥಿಗಳು ಅಲ್ಲಿಯೇ ಒದ್ದಾಡುತ್ತಿದ್ದಾರೆ ಇದನ್ನು ನೋಡಿದ
ಪಬ್ಲಿಕ್ ಆಪ್ ವರದಿಗಾರ ಬಸ್‌ನ್ನು ನಿಲ್ಲಿಸಿ ಚಾಲಕನಿಗೆ ತಿಳಿ ಹೇಳಿದರೇ ನಾನು ಏನೂ ಮಾಡಲಿ ಎಂದು ಹೇಳಿ
ಬಸನ್ನು ಚಲಾಯಿಸಿಕೊಂಡು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವನ್ನು ಆಡುತ್ತಿದ್ದ ಪ್ರಸಂಗವೊAದು ನಡೆದಿದೆ.
ಜೊತು ಬಿದ್ದಿರುವ ವಿದ್ಯಾರ್ಥಿಗಳ ಆಯಾ ತಪ್ಪಿ ಬಿದ್ದರೆ ಮುಂದಾಗುವ ಅನಾಹುತಕ್ಕೆ ಕಾರಣ ಯಾರು ಸಂಬAಧಪಟ್ಟ
ಇಲಾಖೆಯವರು ಬಸ್ ಚಾಲಕರಿಗೆ ಚಾಲನೆ ಬಗ್ಗೆ ಪ್ರಯಾಣಿಕರ ಬಗ್ಗೆ ತಿಳಿ ಹೇಳಿ ಇಂತಹ ಘಟನೆಗಳು
ಮರುಕಳಿದಂತೆ ತಡೆಯುತ್ತಾರೆನೋ ಕಾದು ನೋಡಬೇಕಾಗಿದೆ.