Submission of petition demanding formation of SSK Corporation Board ಎಸ್ ಎಸ್ ಕೆ ನಿಗಮ ಮಂಡಳಿ ರಚಿಸಲು ಆಗ್ರಹಿಸಿ ಮನವಿ ಪತ್ರ ಅರ್ಪಣೆ

WhatsApp Group Join Now
Telegram Group Join Now
Instagram Group Join Now
Spread the love

Submission of petition demanding formation of SSK Corporation Board ಎಸ್ ಎಸ್ ಕೆ ನಿಗಮ ಮಂಡಳಿ ರಚಿಸಲು ಆಗ್ರಹಿಸಿ ಮನವಿ ಪತ್ರ ಅರ್ಪಣೆ

SSK Corporation Board ಎಸ್ ಎಸ್ ಕೆ ನಿಗಮ ಮಂಡಳಿ ರಚಿಸಲು ಆಗ್ರಹಿಸಿ ಮನವಿ ಪತ್ರ ಅರ್ಪಣೆ

ಇಳಕಲ್ : ರಾಜ್ಯದಲ್ಲಿ ವಾಸಿಸುವ ಎಸ್ ಎಸ್ ಕೆ ಬಾಂಧವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಡವರಾಗಿದ್ದು ಅವರ ಕಲ್ಯಾಣಕ್ಕಾಗಿ

ಕೂಡಲೇ ನಿಗಮ ಮಂಡಳಿ ರಚಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿ ಮನವಿಪತ್ರವನ್ನು ತಹಸೀಲ್ದಾರ ಕಚೇರಿಯ ಮೂಲಕ ಅರ್ಪಿಸಲಾಯಿತು.

ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಜಮನಾದಾಸ ಕಾಟವಾ ಮಾತನಾಡಿ ಎಸ್ ಎಸ್ ಕೆ ಸಮಾಜದ ಜನರಲ್ಲಿ ಪ್ರತಿಶತ ೧೫ ರಷ್ಟು

ಜನ ಶ್ರೀಮಂತರಾಗಿದ್ದು ಉಳಿದ ೮೫ ರಷ್ಟು ಜನ ಬಡತನದ ರೇಖೆಯಲ್ಲಿಯೇ ಇದ್ದಾರೆ ಸೋಡಾ ಅಂಗಡಿ ,ಸಾವಜಿ ಖಾನಾವಳಿ ನಡೆಸುತ್ತಾ

ದೈನಂದಿನ ಬದುಕು ನಡೆಸುತ್ತಿದ್ದು ಸಾಕಷ್ಟು ತೊಂದರೆಯಲ್ಲಿ ಸಮಾಜ ಬಾಂಧವರು ಇದ್ದಾರೆ ಅವರಿಗೆ ಅನುಕೂಲ ಆಗುವಂತೆ ತಾಲೂಕಿಗೆ

ಒಂದು ಸಮುದಾಯ ಭವನ, ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವದು ಮತ್ತು ಸಹಸ್ರಾರ್ಜುನ ಸೂರ್ಯವಂಶ ಮಹಾರಾಜರ

ಜನುಮ ದಿನವನ್ನಾಗಿ ಸರಕಾರದ ವತಿಯಿಂದ ಸುತ್ತೋಲೆ ಕಳಿಸಿ ರಾಜ್ಯಾದ್ಯಂತ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿಪತ್ರವನ್ನು ಗ್ರೇಡ್ ಟು ತಹಸೀಲ್ದಾರ ಈಶ್ವರ ಗಡ್ಡಿ ಅವರಿಗೆ ಅರ್ಪಿಸಿದರು. ಈ ಸಮಯದಲ್ಲಿ ಬಾಬು ರಾಜೊಳ್ಳಿ,ನಾಗರಾಜ ರಾಜೊಳ್ಳಿ,

ನಾಗರಾಜ ನಗರಿ ,ಸಂತೋಷ ರಾಜೊಳ್ಳಿ, ಪರಶುರಾಮ ಪವಾರ, ಜಗದೀಶ್ ರಾಜೊಳ್ಳಿ, ಮಹದೇವಸಾ ಕಾಟವಾ, ಸುನೀಲ್ ಚವ್ಹಾಣ,

ನರಸಿಂಗ ಕಾಟವಾ, ರವಿನಾರಾಯಣ ರಾಯಬಾಗಿ , ರಾಘವೇಂದ್ರ ಕಾಟವಾ ಮತ್ತಿತರರು ಪಾಲ್ಗೊಂಡಿದ್ದರು.


Spread the love

Leave a Comment

error: Content is protected !!