PKPS ಹಿರೇಕೊಡಗಲಿ ಪಿಕೆಪಿಎಸ್ ಅಧ್ಯಕ್ಷರಾಗಿ ಸುರೇಶ ಗೊರಬಾಳ ಅವಿರೋಧವಾಗಿ ಆಯ್ಕೆ
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ
ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸುರೇಶ ಗೊರಬಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹನಮಪ್ಪ ಇಂಗಳಗಿ ಆಯ್ಕೆಯಾಗಿದ್ದಾರೆ ಎಂದು ಚುನವಣಾಧಿಕಾರಿ ಮಹಾಂತೇಶ ಅರಹುಣಸಿ ತಿಳಿಸಿದ್ದಾರೆ.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಮಹಾಂತೇಶ ನರಗುಂದ, ಮುಖಂಡ ಮುತ್ತಣ್ಣ ಜಾಧವ
ಹಾಗೂ ಗ್ರಾಮದ ಮುಖಂಡರು ಹಿರಿಯರು ಮತ್ತು ನಿರ್ದೇಶಕರು ಸತ್ಕರಿಸಿ ಗೌರವಿಸಿದರು.