ಸ್ವಾಮೀಜಿಗಳಿಗೆ ರಾಜಕೀಯದಲ್ಲಿ ಪ್ರವೇಶ ಸಲ್ಲ : ಸಚಿವ ಆರ್.ಬಿ. ತಿಮ್ಮಾಪೂರ
ಒಕ್ಕಲಿಗ ಸ್ವಾಮೀಜಿ ಸೇರಿದಂತೆ ಯಾವುದೇ ಮಠಾಧೀಶರು ರಾಜಕೀಯ ವಿಷಯದಲ್ಲಿ ಪ್ರವೇಶ ಸರಿಯಲ್ಲ. ಅವರೇ ಈ ಕುರಿತು ಯೋಚಿಸಬೇಕು ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪೂರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮಠಾಧೀಶರು ರಾಜಕೀಯ ಬಗ್ಗೆ ಚರ್ಚಿಸುವುದು ಎಷ್ಟು ಸೂಕ್ತ ಎನ್ನುವುದನ್ನು ಅವರೇ ಅರಿತುಕೊಳ್ಳಬೇಕು. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಆ ಜಾಗದಲ್ಲಿ ಈಗಾಗಲೇ ಸಿದ್ದರಾಮಯ್ಯ ಇದ್ದಾರೆ. ಬದಲಾವಣೆ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.