Take advantage of property tax rebate: ILKAL Municipal Commissioner Rajarama Pawar ಆಸ್ತಿ ತೆರಿಗೆ ರಿಯಾಯಿತಿ ಸದುಪಯೋಗ ಪಡೆದುಕೊಳ್ಳಿ: ಇಳಕಲ್ ಪೌರಾಯುಕ್ತ ರಾಜಾರಾಮ ಪವಾರ
ಆಸ್ತಿ ತೆರಿಗೆ ರಿಯಾಯಿತಿ ಸದುಪಯೋಗ ಪಡೆದುಕೊಳ್ಳಿ: ಪೌರಾಯುಕ್ತ ಪವಾರ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರಸಭೆಗೆ ಭರಣಾ ಮಾಡುವ ಆಸ್ತಿ ತೆರಿಗೆಯ ಹಣವನ್ನು ಎಪ್ರಿಲ್ ತಿಂಗಳಲ್ಲಿ ತುಂಬಿದರೇ ಐದು ಪ್ರತಿಶತ ರಿಯಾಯಿತಿ ಇದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪೌರಾಯುಕ್ತ ರಾಜಾರಾಮ ಪವಾರ ಹೇಳಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ರಾಜ್ಯ ಸರಕಾರ ಸ್ವಯಂ ಘೋಷಿತ ತೆರಿಗೆಯನ್ನು ಎಪ್ರಿಲ್ ತಿಂಗಳಲ್ಲಿಯೇ ತುಂಬಿದರೆ ಐದು ಪ್ರತಿಶತ ರಿಯಾಯಿತಿ ನೀಡಿದೆ ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಂಡು ತೆರಿಗೆ ತುಂಬಿದರೇ ನಗರಸಭೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಕಾರಿ ಆಗುತ್ತದೆ ಎಂದು ವಿವರಿಸಿದರು.