ಸೆ.೦೫ ರಂದು ಇಳಕಲ್ ನಗರದಲ್ಲಿ ತಾಲೂಕು ಶಿಕ್ಷಕರ ದಿನಾಚರಣೆ
ಇಳಕಲ್ : ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಇಲ್ಲಿನ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ
ಹುನಗುಂದ ಇಳಕಲ್ ಅವಳಿ ತಾಲೂಕು ಶಿಕ್ಷಕರ ದಿನಾಚರಣೆ ಯನ್ನು ಮುಂಜಾನೆ, ೧೦ ಗಂಟೆಗೆ ಏರ್ಪಡಿಸಲಾಗಿದೆ.
ಸಾನಿಧ್ಯವನ್ನು ಗುರುಮಹಾಂತಶ್ರೀಗಳು ಅಧ್ಯಕ್ಷತೆಯನ್ನು ಮತ್ತು ಉದ್ಘಾಟನೆಯನ್ನು ವೀರಶೈವ ಲಿಂಗಾಯತ ಅಭಿವೃದ್ಧಿ
ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಸಚಿವರು ಮತ್ತು ಶಾಸಕರು ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ,ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ,
ಹುನಗುಂದ ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಉಪಾಧ್ಯಕ್ಷೆ ರಾಜವ್ವ ಬದಾಮಿ,ಅಮೀನಗಡ ಪಟ್ಟಣ ಪಂಚಾಯತಿ
ಅಧ್ಯಕ್ಷೆ ಬೇಬಿ ಚವ್ಹಾಣ, ಉಪಾಧ್ಯಕ್ಷೆ ಉಮಾಶ್ರೀ ಹಣಗಿ, ಕಮತಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ರಮೇಶ ಜಮಖಂಡಿ, ಉಪಾಧ್ಯಕ್ಷೆ ನೇತ್ರಾವತಿ
ನಿಂಬಲಗುAದಿ ಆಡಳಿತಾಧಿಕಾರಿ ಡಾ ಬಿ ಆರ್ ಪುನೀತ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ ಕೆ ನಂದನೂರ ಡಿವಾಯ್
ಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಉಪನ್ಯಾಸಕರಾಗಿ ಜೊಯಿಡಾ ಅಣಸಿಯ ವಿಷ್ಣು ಪಟಗಾರ ಆಗಮಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ತಿಳಿಸಿದ್ದಾರೆ.