
ಟಂಟಂ ಪಲ್ಟಿ ಮಹಿಳೆ ಸಾವು : ಇಬ್ಬರಿಗೆ ಗಾಯ
ಮುಧೋಳ : ಟಂಟಂ ಪಲ್ಟಿಯಾಗಿ ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯ ಸಮಯದಲ್ಲಿ ನಡೆದಿದೆ.
ಜೀರಗಾಳ ಬೈ ಪಾಸ್ ಬಳಿ ಟಂಟಂ ಪಲ್ಟಿಯಾಗಿದ್ದು ಮಹಿಳೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. ಮೃತ ಮಹಿಳೆಯನ್ನು ಪೂಜಾ ಬೆಳಗಲಿ ಎಂದು ಗುರುತಿಸಲಾಗಿದೆ.ಅಪಘಾತದಲ್ಲಿ ಚಾಲಕ ಮತ್ತು ಮತ್ತೋರ್ವ ಮಹಿಳೆ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮುಧೋಳ ಪೊಲೀಸ್‌ರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.





