Textile park ಇಳಕಲ್ ನಗರದಲ್ಲಿ ಶೀಘ್ರವೇ ಜವಳಿ ಪಾರ್ಕ್ ನಿರ್ಮಾಣ ಶಾಸಕ ಕಾಶಪ್ಪನವರ
ಇಳಕಲ್ : ನೇಕಾರಿಕೆಯ ನಗರವಾದ ಇಳಕಲ್ ನಲ್ಲಿ ಇದೇ ಅವಧಿಯಲ್ಲಿ ಜವಳಿ ಪಾರ್ಕ್ ನಿರ್ಮಿಸಿಕೊಡುವದಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಭರವಸೆ ನೀಡಿದರು.
ಇಲ್ಲಿನ ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರದಂದು ನಡೆದ ರಾಷ್ಟ್ರೀಯ ನೇಕಾರರ ದಿನಾಚರಣೆ ಅಂಗವಾಗಿ ನೇಕಾರರ ಅಧಿಕೃತ ಕಾರ್ಡುಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ನೇಕಾರರ ಕಲ್ಯಾಣಕ್ಕಾಗಿ
ಸರಕಾರ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ ಯಾರು ನೇಕಾರರು ಎಂಬುವದಕ್ಕೆ ಅಧಿಕೃತ ಕಾರ್ಡುಗಳನ್ನು ಕೊಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ನೂಲು ಸುತ್ತುವ ರಾಟಿಯನ್ನು ತಿರುಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರ ಜೊತೆಗೆ ಬಾಗಲಕೋಟೆ ಜಿಲ್ಲೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ವೆಂಕಟೇಶ ಸಾಕಾ, ಶರಣಪ್ಪ ಆಮದಿಹಾಳ, ಅಬ್ದುಲರಜಾಕ ತಟಗಾರ, ರಾಜು ಬೋರಾ, ಜಗದೀಶ ಪೋತಾ, ಮಂಜುನಾಥ ಸಪ್ಪರದ, ರಾಘವೇಂದ್ರ ಚಿಂಚಮಿ, ಶ್ರೀನಿವಾಸ ಗುರಂ,
ವಿದ್ಯಾಧರ ಗೋಟುರ, ಅಮೃತ ಬಿಜ್ಜಳ, ಭಾಗ್ಯ ಸಪ್ಪರದ , ತೇಜಮ್ಮ ವದ್ದಿ, ಜಯಲಕ್ಷ್ಮಿ ಯಂಗಾಲಿ, ನಾರಾಯಣ ಪೂಜಾರಿ , ಅಹಮದಸಾಬ ಬಾಗವಾನ ಕಂಡಕ್ಟರ್ ಮತ್ತಿತರರು ಪಾಲ್ಗೊಂಡಿದ್ದರು.