Badami Police ಬಾದಾಮಿ ಆರಕ್ಷಕ ಇಲಾಖೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ
ಮನೆ ಮನೆಗೆ ಪೊಲೀಸ್ ವ್ಯವಸ್ಥೆ ಜಾಗೃತಿ ಕಾರ್ಯಕ್ರಮ ಶುರು.
ಸರಕಾರದ ಆದೇಶದಂತೆ ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಮನೆ ಮನೆಗೆ ಪೊಲೀಸ್ ವ್ಯವಸ್ಥೆ ಎನ್ನುವ ಮೆನ್ ಮನೆಗೆ ಹೋಗಿ ಪೊಲೀಸ್ ಇಲಾಖೆಯ ಸಿಬ್ಬಂದಿ ಹೋಗಿ ಜನರ ಕಷ್ಟಗಳ ಬಗ್ಗೆ ವಿಚಾರಿಸಿ ಸರಕಾರ ವ್ಯವಸ್ಥೆಗಳಾದ ೧೧೨ ಹಾಗೂ ಹೆಲ್ಮೆಟ್ ಮಹತ್ವದ ಜಾಗೃತಿ ಬಗ್ಗೆ, ಬಾಲ್ಯವಿವಾಹ, ಮಹಿಳಾ ಮತ್ತು ಮಕ್ಕಳ ಆಂದೋಲನದ ಬಗ್ಗೆ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಪೊಲೀಸ್ ಇಲಾಖೆ ಸಿಬ್ಬಂದಿಯವರೇ ಸ್ವತಃ ಸಾರ್ವಜನಿಕರ ಮನೆ ಮನೆಗೆ ತೆರಳಿ ಅವರ ಸಮಾಚಾರವನ್ನು ಅಲ್ಲೇ ಕೇಳಿಕೊಂಡು ಆ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರಕಾರ ತೆಗೆದುಕೊಂಡ ಕಾರ್ಯಕ್ರಮ, ಹಾಗೂ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರ ನಿರ್ದೇಶನದಂತೆ ಬಾದಾಮಿ ಆರಕ್ಷಕ ಠಾಣೆಯ ವ್ಯಾಪ್ತಿಯ ಆಲದಕಟ್ಟಿ ಗ್ರಾಮವನ್ನು ಮೊದಲಿಗೆ ಆಯ್ಕೆ ಮಾಡಿಕೊಂಡಿದ್ದು.
ಇದೇ ತಿಂಗಳು ಜುಲೈ ೧೬/೭/೨೦೨೫ ರಂದು ಬಾದಾಮಿ ಆರಕ್ಷಕ ಠಾಣೆಯ ಎಲ್ಲಾ ಪೊಲೀಸ ಸಿಬ್ಬಂದಿಯವರು ಬಾದಾಮಿ ತಾಲ್ಲೂಕಿನ ಆಲದಕಟ್ಟಿ ಗ್ರಾಮಕ್ಕೆ ಹೋಗಿ ಪ್ರತಿಯೊಂದು ಮನೆ ಮನೆಗೆ ಸ್ವತಃ ಪೊಲೀಸ್ ಸಿಬ್ಬಂದಿಯವರು ತೆರಳಿ ಸರಕಾರದ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಬಾದಾಮಿ ಆರಕ್ಷಕ ಠಾಣೆಯ ಪಿ.ಎಸ್. ಐ.ವಿಠಲ್ ನಾಯಿಕ್ ಪತ್ರಿಕಾ ಪ್ರಕಟಣೆ ಹಾಗೂ ಮಾದ್ಯಮಕ್ಕೆ ತಿಳಿಸಿದ್ದಾರೆ.






