ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಮಗು ಇಳಕಲ್‌ದ ದರ್ಗಾದಲ್ಲಿ ಪುನರ್ಜನ್ಮ ಪಡೆದ ಮಗು The child who died in the hospital was reincarnated in the dargah of Ilakal

WhatsApp Group Join Now
Telegram Group Join Now
Instagram Group Join Now
Spread the love

 

ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಮಗು ಇಳಕಲ್‌ದ ದರ್ಗಾದಲ್ಲಿ ಪುನರ್ಜನ್ಮ ಪಡೆದ ಮಗು

 

ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಮಗು ಇಳಕಲ್‌ದ ದರ್ಗಾದಲ್ಲಿ ಪುನರ್ಜನ್ಮ ಪಡೆದ ಮಗು

 

ಬಾಗಲಕೋಟ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಣ ಹೋಗಿದೆ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿ ಎಂದ ಮಗುವನ್ನು ಇಳಕಲ್‌ದ ಮುರ್ತುಜಾ ಖಾದ್ರಿ ದರ್ಗಾಕ್ಕೆ ತೆಗೆದುಕೊಂಡು ಬಂದಾಗ ಮಗು ಪುನರ್ಜನ್ಮ ಪಡೆದ ಸ್ವಾರಸ್ಯಕರ ಸಂಗತಿ ಗುರುವಾರದಂದು ಸಂಜೆ ನಡೆದಿದೆ.

ಇಳಕಲ್ ನಗರದ ದ್ಯಾಮಣ್ಣ ಬಸವರಾಜ ಭಜಂತ್ರಿ ಎಂಬ ಒಂದು ವರ್ಷದ ಮಗುವನ್ನು ಬಾಗಲಕೋಟ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು ಇಂದು ಸಂಜೆ ಮಗುವಿನ ಪ್ರಾಣ ಹೋಗಿದೆ ಊರಿಗೆ ಒಯ್ದು ಬಿಡಿ ಎಂದು ವೈದ್ಯರು ಹೇಳಿದ್ದಾರೆ.

ಮಗುವನ್ನು ವಾಹನದಲ್ಲಿ ಮರಳಿ ಇಳಕಲ್ ಗೆ ತರುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಅದು ಸ್ವಲ್ಪ ಕೆಮ್ಮಿದಾಗ ಮನೆಯವರಿಗೆ ಆಶ್ಚರ್ಯವಾಗಿ ಅದನ್ನು ನಗರದ ಕೋಮು ಸಾಮರಸ್ಯ ಕೇಂದ್ರವಾದ ಮುರ್ತುಜಾ ಖಾದ್ರಿ ದರ್ಗಾಕ್ಕೆ ತಂದು ಅಲ್ಲಿ ಸಮಾಧಿ ಮುಂದಿನ ಕಟ್ಟೆಯ ಮೇಲೆ ಮಲಗಿಸಿದ್ದಾರೆ.

ಪವಾಡ ಎಂಬAತೆ ಮಗು ಆ ಜಾಗದಲ್ಲಿ ಕೈಕಾಲು ಆಡಿಸತೊಡಗಿತು ಅದರ ಅಂತ್ಯ ಸಂಸ್ಕಾರಕ್ಕೆ ಎಂದು ಬಂದ ಜನ ಮಗುವನ್ನು ಕುತೂಹಲದಿಂದ ನೋಡಿ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಲಿಯುಗದಲ್ಲಿಯೂ ಇಂತಹ ಆಶ್ಚರ್ಯಕರ ಘಟನೆಗಳು ನಡೆಬಹುದೇ ಎಂಬ ಮಾತುಗಳು ಕೇಳಿ ಬರುತ್ತಲಿವೆ.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 


Spread the love

Leave a Comment

error: Content is protected !!