ಬನಶಂಕರಿದೇವಿ ಅವತರಿಸಿದ ದಿನ : ಬೆಳ್ಳಿ ರಥವನ್ನು ಎಳೆದ ಮಹಿಳೆಯರು
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಶ್ರೀ ಶಂಕರಿ ರಾಮಲಿಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ಬುಧವಾರದಂದು ಬನಶಂಕರಿದೇವಿ ಅವತರಿಸಿದ ದಿನವನ್ನು ಬೆಳ್ಳಿ ರಥೋತ್ಸವ ಸಾಯಂಕಾಲ ೭ ಗಂಟೆಗೆ ಮಹಿಳೆಯರು ಎಳೆಯುವ ಮೂಲಕ ಸಂಭ್ರಮದಿAದ ಆಚರಿಸಿದರು.
ಮುಂಜಾನೆ ೭ ಗಂಟೆಗೆ ದೇವಿಗೆ ಅಭಿಷೇಕ ಮಾಡಿ ನಂತರ ಮಹಾ ಮಂಗಳಾರತಿ ಮಾಡಿ ಬಂದ ಎಲ್ಲಾ ಭಕ್ತರಿಗೆ ತೀರ್ಥ ಪ್ರಸಾದ ನೀಡಿದರು. ಸಾಯಂಕಾಲ ೬ ಗಂಟೆಗೆ ಲಲಿತಾ ಪಾರಾಯಣ ನಡೆಯಿತು. ನಂತರ ಬೆಳ್ಳಿ ರಥೋತ್ಸವ ಮಹಿಳೆಯರು ಸಂಭ್ರಮದಿAದ ಎಳೆದರು.
ಈ ಸಮಯದಲ್ಲಿ ಗುರುಗಳಾದ ಮುನಿಸ್ವಾಮಿ ದೇವಾಂಗಮಠ ಹಾಗೂ ಟ್ರಸ್ಟ ಕಮೀಟಿಯ ಹಿರಿಯರಾದ ಅಶೋಕ ಬಿಜ್ಜಲ ಶಿವಪುತ್ರಪ್ಪ ಕರ್ಜಗಿ, ವಿಠ್ಠಲ ಅರಳಿಕಟ್ಟಿ,ಪಂಪಣ್ಣ ಚಿಂಚಮಿ, ಟಿ. ಎಂ. ರಾಮದುರ್ಗ, ಶಂಕ್ರಪ್ಪ ಕಡೂರ, ಚಳಿಗೇರಿ,ಮಹಾಂತೇಶ ಕರ್ಜಗಿ, ನಾರಾಯಣ ಬಿಜ್ಜಲ, ರಾಜು ಧೂಪದ, ಸೋಮು ಮುರಕಂಣದ ಮತ್ತು ಮಹಿಳೆಯರು, ಯುವಕರು ಭಾಗವಹಿಸಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)