ಸಂಭ್ರಮದಿಂದ ನಡೆದ ಈದ್ ಮಿಲಾದ್ ಹಬ್ಬ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರವರ ೧೪೫೪ ನೇ
ಜನ್ಮದಿನದ ಅಂಗವಾಗಿ ನಡೆದ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮಾಜದ ಮುಖಂಡರಾದ
ಉಸ್ಮಾನಗಣಿ ಹುಮನಾಬಾದ್, ಅಬ್ದುಲರಜಾಕ ತಟಗಾರ, ಅಬ್ಬು ಹಳ್ಳಿ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.
ನಗರದ ೧೦ ನೇ ನಂಬರ್ ಶಾಲೆ ಹತ್ತಿರದ ಮದೀನಾ ಶಾದಿಮಹಲ್‌ದಿಂದ ಆರಂಭವಾದ ಮೆರವಣಿಗೆ ನಗರದ
ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುರ್ತುಜಾ ಖಾದ್ರಿ ದರ್ಗಾ ತಲುಪಿ ಅಲ್ಲಿ ವಿಶೇಷ ಪ್ರಾರ್ಥನೆಯನ್ನು
ಸಲ್ಲಿಸುವ ಮೂಲಕ ಸಂಭ್ರಮದಿAದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು.
ಗೂಡುಸಾಬ ವೆಂಕಟಾಪೂರ, ಹೈದರಸಾಬ ಹಳ್ಳಿ, ಮೋದಿನ್‌ಬಾಷಾ ಹುಣಚಗಿ, ಡಾ.ಟಿಪ್ಪು ಭಂಡಾರಿ,
ನಿಸಾರಅಹಮ್ಮದ ಬೇಪಾರಿ, ಬಬ್ಲೂ ಬಿಳೇಕುದರಿ, ಯುಸುಫ್ ಬಾಗವಾನ, ಯುನುಸ ಮುದಗಲ್ಲ
ಮತ್ತು ಸಮಾಜದ ಹಿರಿಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.