ಬಾಗಿಲು ತೆರೆಯಲಿಲ್ಲವೆಂದು ಮಹಿಳೆ ಮೇಲೆ ಆ್ಯಸಿಡ್ ಎರಚಿದ ಪ್ರಿಯತಮ
ಬಾಗಲಕೋಟೆ : ಪ್ರಿಯತಮೆ ಮನೆಯ ಬಾಗಿಲು ತೆರೆಯಲಿಲ್ಲವೆಂದು ಪ್ರಿಯಕರ ಪ್ರಿಯತಮೆಯ ಮೇಲೆ ನೀರು ಮಿಶ್ರಿತ ಎಸಿಡ್ ಎರಚಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್‌ನಲ್ಲಿ ಮಂಗಳವಾರದAದು ಜರುಗಿದೆ.
ಆ್ಯಸಿಡ್ ದಾಳಿಗೆ ಒಳಗಾಗಿರುವ ಮಹಿಳೆಯನ್ನ ಲಕ್ಷ್ಮೀ ಬಡಿಗೇರ ಎಂದು ಗುರ್ತಿಸಲಾಗಿದೆ.ಎಸಿಡ್ ದಾಳಿ ಮಾಡಿದ ವ್ಯಕ್ತಿಯನ್ನ ಮೌನೇಶ ಪತ್ತಾರ ಎಂದು ಗುರ್ತಿಸಲಾಗಿದೆ.ಎಸಿಡ್ ದಾಳಿಗೆ ಒಳಗಾಗಿರುವ ಮಹಿಳೆಗೆ ಎಡಗಣ್ಣು ಹಾಗೂ ಮುಖದ ಮೇಲೆ ಗಾಯಗಳಾಗಿವೆ.ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಆರೋಪಿಯನ್ನ ಪೊಲೀಸರು ಬಂಧಿಸಿದ್ದು ತನಿಖೆಯನ್ನ ಮುಂದುವರೆಸಿದ್ದಾರೆ.