
Kannada Rajyotsava ಕನ್ನಡ ರಾಜ್ಯೋತ್ಸವ ಆಚರಿಸಿದ ಕರವೇ
ಇಳಕಲ್ : ನಗರದ ಕಂಠಿ ಸರ್ಕಲ್‌ದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ತಾಯಿ ಭುವನೇಶ್ವರಿ
ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸುವ ಮೂಲಕ ಶನಿವಾರದಂದು ಆಚರಿಸಲಾಯಿತು.
೭೦ ನೇ ಕನ್ನಡ ಧ್ವಜಾರೋಹಣವನ್ನು ತಾಲೂಕಾ ಅಧ್ಯಕ್ಷ ಅಶೋಕ ಪೂಜಾರಿ ನೆರವೇರಿಸಿ ಕನ್ನಡ
ಅಭಿಮಾನ ಕುರಿತು ಮಾತನಾಡಿದರು. ಈ ಸಮಯದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಆರೇರ,
ನಗರಸಭೆ ನಾಮನಿರ್ದೇಶಿತ ಸದಸ್ಯ ಯಲ್ಲಪ್ಪ ರಾಜಾಪೂರ, ರಿಯಾಜ ಮಕಾನದಾರ ಹಾಗೂ
ಕರವೇ ಪದಾಧಿಕಾರಿಗಳು ಮತ್ತು ಕನ್ನಡಾಭಿಮಾನಿಗಳು ಇದ್ದರು.





