ಕಂದಗಲ್ಲ ಗ್ರಾಮದಲ್ಲಿ ಮನೆ ಮೇಲ್ಚಾವಣಿ ಕುಸಿದು ಮಕ್ಕಳು ಸಾವು : ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ ನಂದವಾಡಗಿ ಶ್ರೀಮಠದ ಡಾ.ಚನ್ನಬಸವಮಹಾಸ್ವಾಮೀಗಳು
ಇಳಕಲ್ಲ : ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದು ಇಬ್ಬರು ಮಕ್ಕಳು ಮೃತರಾದ ಕುಟುಂಬಸ್ಥರ ಮನೆಗೆ ನಂದವಾಡಗಿ ಮಹಾಂತಲಿಂಗ ಶ್ರೀಮಠದ ಡಾ.ಚನ್ನಬಸವಮಹಾಸ್ವಾಮೀಗಳು ರವಿವಾರದಂದು ಮಧ್ಯಾಹ್ನ ೧೨ ಗಂಟೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತರಾದ ಮಕ್ಕಳ ತಂದೆ ಈಶ್ವರಯ್ಯ ಆದಾಪೂರ ಮಠ ಮತ್ತು ಕುಟುಂಬಸ್ಥರಿಗೆ ಶ್ರೀಗಳು ಕಷ್ಟ ಸುಖಗಳು ಸಾಮಾನ್ಯವಾಗಿ ಎಲ್ಲರಿಗೂ ಬರುತ್ತವೆ ಈ ಸಮಯದಲ್ಲಿ ಹೆದರದೆ ಅವುಗಳನ್ನು ಎದುರಿಸುವ ಧರ‍್ಯದಿಂದ ಇರಬೇಕು, ದೇವರು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಧರ‍್ಯವನ್ನು ತುಂಬಿದರು.
ಈ ಸಂದರ್ಭದಲ್ಲಿ ಗ್ರಾಮದ ಶರಣಯ್ಯ ಮಠ, ಮಹಮ್ಮದಸಾಬ ಭಾವಿಕಟ್ಟಿ, ಪಂಪಯ್ಯ ಗುರುವಿನಮಠ, ಶ್ರೀಕಾಂತ ಸಜ್ಜನ, ಪ್ರಭು ಹಿರೇಮಠ ಮಲ್ಲು ಕೊಡಕೇರಿ, ಷಡಕ್ಷರಯ್ಯ ಮಠ ಇದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)