ಸನ್ನೆ ಮಾಡಿದ ಯುವಕನಿಗೆ ಬಿತ್ತು ಚಪ್ಪಲಿ ಏಟು
ವಿಜಯಪುರ: ಕಣ್ಣು ಹೊಡೆದು ಸನ್ನೆ ಮಾಡಿದ ಯುವಕನಿಗೆ ಮಹಿಳೆಯೊಬ್ಬರು ಚಪ್ಪಲಿಯಲ್ಲಿ ಹೊಡೆದು
ಬುದ್ದಿ ಕಲಿಸಿದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಮಹಿಳೆಗೆ ಕಣ್ಣು ಹೊಡೆದು, ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದರಿಂದ
ಕೋಪಿತಳಾದ ಮಹಿಳೆ ಯುವಕನಿಗೆ ಸಾರ್ವಜನಿಕರ ಮುಂದೆಯೇ ಚಪ್ಪಲಿ ಏಟು ನೀಡಿರುವ
ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.