missing mobile in the Tehsildar’s office ತಹಸೀಲ್ದಾರ ಕಚೇರಿಯಲ್ಲಿ ಕಾಣೆಯಾದ ಒಂದು ಮೊಬೈಲ್ ಸುತ್ತ ಅನುಮಾನದ ಹುತ್ತ
ಬಾಗಲಕೋಟ \ ಇಳಕಲ್ : ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ಕಾಣೆಯಾದ ಒಂದು ಮೊಬೈಲ್ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಕಚೇರಿಯಲ್ಲಿ ದಿನನಿತ್ಯದ ಕಾರ್ಯಗಳು ಎಂದಿನAತೆ ನಡೆದ ಸಮಯದಲ್ಲಿ ಕಚೇರಿಯ ಸಿಬ್ಬಂದಿ ಒಬ್ಬರ ಮೊಬೈಲ್ ಕಾಣೆಯಾಯ್ತು ಅವರು ನನ್ನ ಮೊಬೈಲ್ ,ನನ್ನ ಮೊಬೈಲ್ ಎಂದು ಕಂಡ ಕಂಡವರಿಗೆಲ್ಲಾ ಕೇಳುತ್ತಾ ಸಾಗಿದ್ದಾರೆ. ಕಚೇರಿಯ ಸಿಬ್ಬಂದಿ ಜೊತೆಗೆ ಕೆಲಸದ ಮೇಲೆ ಕಾರ್ಯಾಲಯಕ್ಕೆ ಬಂದ ಗ್ರಾಹಕರಿಗೂ ಕೇಳಿದ್ದಾರೆ.
ಆಧಾರ ಕಾರ್ಡು ಮಾಡಿಸಲು ಬಂದ ಮಹಿಳೆಗೂ ಸ್ವತಃ ತಹಸೀಲ್ದಾರರು ಕೇಳಿದ್ದಾರೆ ಎಲ್ಲರಂತೆ ಆ ಮಹಿಳೆಯೂ ಇಲ್ಲ ಎಂದಾಗ ತಹಸೀಲ್ದಾರರು ಆಯ್ತು ಹೋಗಮ್ಮ ಎಂದು ಕಳಿಸಿದ್ದಾರೆ.
ಮೊಬೈಲ್ ಹೋಗಿ ಆರು ಗಂಟೆಯ ನಂತರ ಕಚೇರಿಯ ಸಿಬ್ಬಂದಿ ಒಬ್ಬ ಕಾಣೆಯಾದ ಆ ಮೊಬೈಲ್ ನ್ನು ತೆಗೆದುಕೊಂಡು ಬಂದಾಗ ನಾನು ಹೊರಗೆ ಕೆಲಸಕ್ಕೆ ಹೋದಾಗ ಈ ಮೊಬೈಲ್ ತೆಗೆದುಕೊಂಡು ಹೋಗಿದ್ದೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಆದರೆ ಈ ವಿಷಯ ಹೊರಗೆ ಹೋಗಿ ತಹಸೀಲ್ದಾರ ಕಚೇರಿಯಲ್ಲಿ ಒಂದು ಮೊಬೈಲ್ ಗಾಗಿ ದಲಿತ ಮಹಿಳೆಯನ್ನು ಕೂಡಿ ಹಾಕಿ ಅವಮಾನ ಮಾಡಿದ್ದಾರೆ ಎಂದು ಕೆಲವರು ಕಚೇರಿಗೆ ಹೋಗಿ ಅಧಿಕಾರಿಗಳ ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾರೆ ಈ ಪ್ರಕರಣದಲ್ಲಿ ದಲಿತ ಮಹಿಳೆಗೆ ಅನ್ಯಾಯವಾಗಿದೆ ಎಂಬ ಕೂಗು ಎದ್ದಿದೆ.
ಓರ್ವ ಸಿಬ್ಬಂದಿಗೆ ಹಾಸ್ಯ ಮಾಡಲು ಹೋಗಿ ಮೊಬೈಲ್ ತೆಗೆದುಕೊಂಡು ಹೋದ ಈ ಪ್ರಕರಣ ಇಡೀ ಕಚೇರಿಗೆ ಆವರಿಸಿಕೊಂಡಿದೆ.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)