Thief ದರೋಡೆ ಮಾಡಲು ಪ್ರವೇಶಿಸಿದ ಮನೆ ನೆಲದ ಮೇಲೆ ನಿದ್ರೆಗೆ ಜಾರಿದ ಕಳ್ಳ
ಉತ್ತರ ಪ್ರದೇಶದ ಲಕ್ನೋದಲ್ಲಿ ದರೋಡೆ ಮಾಡಲು ಪ್ರವೇಶಿಸಿದ ಮನೆಯೊಂದರ ನೆಲದ ಮೇಲೆ ನಿದ್ರೆಗೆ ಜಾರಿದ ವ್ಯಕ್ತಿಯನ್ನು ಭಾನುವಾರ (ಜೂನ್ 2) ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಆ ವ್ಯಕ್ತಿ ಅತಿಯಾಗಿ ಕುಡಿದಿದ್ದನು ಮತ್ತು ಹವಾನಿಯಂತ್ರಣವನ್ನು ಕಂಡು ಅದನ್ನು ಆನ್ ಮಾಡಿದ ನಂತರ ಮನೆಯೊಳಗೆ ತಣ್ಣನೆ ಗಾಳಿಯ ಪರಿಣಾಮ ನಿದ್ರಿಗೆ ಜಾರಿದ್ದಾನೆ.
ಭಾನುವಾರ ಮುಂಜಾನೆ ಆ ವ್ಯಕ್ತಿ ಲಕ್ನೋದ ಇಂದಿರಾನಗರ ಪ್ರದೇಶದಲ್ಲಿರುವ ಮನೆಯೊಂದರಲ್ಲಿಈ ಘಟನೆ ನಡೆದಿದೆ.
ಈ ಮನೆಯ ಮಾಲಿಕ ಡಾ. ಸುನಿಲ್ ಪಾಂಡೆ ಘಟನೆಯ ಸಮಯದಲ್ಲಿ ಹೊರಗಿದ್ದ ಕಾರಣ. ಮನೆ ಖಾಲಿಯಾಗಿರುವುದನ್ನು ಕಂಡ ಆ ವ್ಯಕ್ತಿ ಮನೆಯ ಮುಂಭಾಗದ ಬಾಗಿಲನ್ನು ತೆರೆದು ಒಳ ನುಗ್ಗಿದ್ದಾನೆ.
ಮನೆಯ ಡ್ರಾಯಿಂಗ್ ರೂಮ್ ಪ್ರವೇಶಿಸಿದ ಕಳ್ಳ ಮನೆಯಲ್ಲಿರುವ ಎಸಿ ಯನ್ನು ಗಮನಿಸಿ ಅದನ್ನು ಆನ್ ಮಾಡಿದ್ದಾನೆ ನಂತರ, ಅವನು ಆರಾಮವಾಗಿ ನೆಲದ ಮೇಲೆ ಮಲಗಿ, ತೆಲೆದಿಂಬಿನೊಂದಿಗೆ ಶೀಘ್ರದಲ್ಲೇ ನಿದ್ರೆಗೆ ಜಾರಿದ್ದಾನೆ
ಮನೆಯ ಮುಂಭಾಗದ ಬಾಗಿಲು ತೆರೆದಿರುವುದನ್ನು ಕಂಡ ಡಾ. ಪಾಂಡೆ ಅವರ ನೆರೆಹೊರೆಯವರು ಆತನನ್ನು ಕರೆದರು. ಆದರೆ, ಆ ಸಮಯದಲ್ಲಿ ಆತ ಲಕ್ನೋದಲ್ಲಿಲ್ಲದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಆ ವ್ಯಕ್ತಿ ac ಆನ್ ಮಾಡಿ ಆರಾಮವಾಗಿ ಮಲಗಿರುವುದನ್ನು ಅವರು ಕಂಡರು. ಕಳ್ಳನು ತನ್ನ ಬಲಗೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಗಾಢ ನಿದ್ರೆಯಲ್ಲಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.