Three died tragically after falling into a pit ಹೊಂಡದಲ್ಲಿ ಬಿದ್ದು ಮೂವರ ದಾರುಣ ಸಾವು

WhatsApp Group Join Now
Telegram Group Join Now
Instagram Group Join Now
Spread the love

 

Three died tragically after falling into a pit  ಹೊಂಡದಲ್ಲಿ ಬಿದ್ದು ಮೂವರ ದಾರುಣ ಸಾವು

 

Three died ಹೊಂಡದಲ್ಲಿ ಬಿದ್ದು ಮೂವರ ದಾರುಣ ಸಾವು

 

ವಿಜಯಪುರ : ಎಮ್ಮೆಗೆ ನೀರು ಕುಡಿಸಲು ಹೋದ ವೇಳೆ ಕಾಲು ಜಾರಿ ಹೊಂಡದಲ್ಲಿ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋಗಿ ಆಕೆಯೂ ಸೇರಿದಂತೆ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹಡಲಗೇರಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತರನ್ನು ಹಡಲಗೇರಿಯ ನೀಲಮ್ಮ ಹುಲಗಪ್ಪ ಕಿಲಾರಹಿಟ್ಟಿ (19), ಲಡ್ಡುಮುತ್ಯಾ ಮಹಾನಿಂಗಪ್ಪ ಕಿಲಾರಹಟ್ಟಿ (25) ಮತ್ತು ಯಲ್ಲಪ್ಪ ಶಿವಪ್ಪ ಯಾಳವಾರ (30) ಎಂದು ಗುರ್ತಿಸಲಾಗಿದೆ.

ಎಂದಿನAತೆ ನೀಲಮ್ಮ ಎಮ್ಮೆಗಳನ್ನು ಹೊಡೆದುಕೊಂಡು ನೀರು ಕುಡಿಸಲೆಂದು ಹೊಂಡಕ್ಕೆ ತೆರಳಿದ್ದಳು. ಆಗ ಏಕಾಏಕಿ ಕಾಲು ಜಾರಿ ಹೊಂಡದಲ್ಲಿ ಬಿದ್ದಳು. ಅಲ್ಲಿಯೇ ಇದ್ದ ದನ ಮೇಯಿಸುತ್ತಿದ್ದ ನೀಲಮ್ಮಳ ಸೋದರ ಸಂಬAಧಿ ಲಡ್ಡುಮುತ್ಯಾ ಮತ್ತು ಯಲ್ಲಪ್ಪ ಇಬ್ಬರೂ ಆಕೆಯನ್ನು ರಕ್ಷಿಸಲು ಹೊಂಡಕ್ಕೆ ಧುಮುಕಿದ್ದಾರೆ.

Three died tragically after falling into a pit  ಹೊಂಡದಲ್ಲಿ ಬಿದ್ದು ಮೂವರ ದಾರುಣ ಸಾವು

ಆದರೆ ಮೇಲೆ ಬರಲಾಗದೆ ಹೊಂಡದಲ್ಲೇ ಮುಳುಗಿ ಉಸಿರು ಗಟ್ಟಿ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಧಾವಿಸಿ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ ಮೂವರ ಶವಗಳನ್ನು ಹೊಂಡದಿAದ ಮೇಲೆ ತಂದರು.

ಮೃತ ಕುಟುಂಬದವರು, ಬಂಧುಗಳ ಆಕ್ರಂದನ ಮುಗಿಲು ಮುಟ್ಟುವಂತಿತ್ತು.ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈ ಸಂಜಯ್ ತಿಪ್ಪರಡ್ಡಿ ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ.


Spread the love

Leave a Comment

error: Content is protected !!