music competition ಇಳಕಲ್‌ದ ಮೂರು ವಿದ್ಯಾರ್ಥಿಗಳು ಸಂಗೀತ ಸ್ಪರ್ಧೆಯಲ್ಲಿ ಪ್ರಥಮ
ಇಳಕಲ್ : ಇಲ್ಲಿನ ಸ್ವರಸಾಗರ ಸಂಗೀತ ವಿದ್ಯಾಲಯದ ಮೂರು ವಿದ್ಯಾರ್ಥಿಗಳು ಜಿಲ್ಲಾ
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ- ೨೦೨೫
ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಬೆಳಗಾವಿ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಎಂದು ಸ್ವರಸಾಗರ ಸಂಗೀತ ವಿದ್ಯಾಲಯದ ಸಂಚಾಲಕ ಗಣೇಶ ರಾಯಬಾಗಿ ತಿಳಿಸಿದ್ದಾರೆ.
ಶಾಸ್ತ್ರೀಯ ಗಾಯನ-ಯುವ ಪ್ರತಿಭೆ ವಿಭಾಗದಲ್ಲಿ ಶ್ರೀನಿವಾಸ್ ಕೆ ಚವ್ಹಾಣ ಪ್ರಥಮ, ಶಾಸ್ತ್ರೀಯ
ಗಾಯನ-ಬಾಲ ಪ್ರತಿಭೆ ವಿಭಾಗದಲ್ಲಿ ಪ್ರಥಮ್ ರಾಯಬಾಗಿ ಪ್ರಥಮ ಸ್ಥಾನ, ಜಾನಪದ ಗೀತೆ-ಬಾಲ
ಪ್ರತಿಭೆ ವಿಭಾಗದಲ್ಲಿ ಸುದರ್ಶನ ಮಾದರ ಪ್ರಥಮ ಸ್ಥಾನವನ್ನು ಪಡೆದಕೊಂಡರು ನಗರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.






