heavy rain in ಇಳಕಲ್ ನಗರದಲ್ಲಿ ಗುಡುಗು ಸಹಿತ, ಭಾರೀ ಮಳೆ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಗುಡುಗು ಸಹಿತ ಭಾರೀ ಮಳೆ ಗುರುವಾರದಂದು ೧ ಗಂಟೆಗಳ ಕಾಲ ಸುರಿಯಿತು.
ಮುಂಜಾನೆ ಮೂಡ ಮುಸುಕಿದ ವಾತಾವರಣ ನಿರ್ಮಾಣವಾಗಿತ್ತು ಮಧ್ಯಾಹ್ನ ಸುಟ್ಟು ಬಿಸಿಲಿಗೆ ಜನರು ಹೈರಾಣವಾಗಿದ್ದರು.
ಮಧ್ಯಾಹ್ನದ ೩ ಗಂಟೆಯ ಸುಮಾರಿಗೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿದವು ಚರಂಡಿಗಳು ತುಂಬಿ ಹರಿದವು. ಮಕ್ಕಳು ಮಳೆಯಲ್ಲಿ ನೆನೆದು ಖುಷಿಪಟ್ಟ ವರದಿಗಳು ಬಂದವು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)