suicide ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ : ರೈತ ಸಂಘದಿAದ ರೈತನ ಕುಟುಂಬಕ್ಕೆ ಸಾಂತ್ವನ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗಂಗೂರ ಗ್ರಾಮದ ರೈತ ಸಾಲಬಾಧೆಯಿಂದ
ಮನನೊಂದು ವಿಷ ಸೇವಿಸಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.
ಬಾಲಹನಮಪ್ಪ ಮಂಗಳಪ್ಪ ತೆಗ್ಗಿ(೩೦) ಆತ್ಮಹತ್ಯೆ ಮಾಡಿಕೊಂಡ ರೈತ.
ಗಂಗೂರ ಗ್ರಾಮದ ಪಿಕೆಪಿಎಸ್ ಹಾಗೂ ಕೆವಿಜಿ ಬ್ಯಾಂಕ್‌ನಲ್ಲಿ ತಲಾ ೫೦ ಸಾವಿರ ರೂ.
ಹಾಗೂ ಕೈಗಡ ಎರಡು ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.
ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಮನೆಗೆ ಹುನಗುಂದ ಇಳಕಲ್ ತಾಲೂಕಾ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ
ಸಾಂತ್ವನ ತಿಳಿಸಿ ಕುಟುಂಬಸ್ಥರಿಗೆ ಧೈರ್ಯವನ್ನು ತುಂಬಿದರು. ಸರಕಾರದಿಂದ ಸಿಗುವ ಎಲ್ಲಾ ರೀತಿಯ ಪರಿಹಾರವನ್ನು ಅಧಿಕಾರಿಗಳು
ಮತ್ತು ಜನಪ್ರತಿನಿಧಿಗಳು ಮೃತರ ಕುಟುಂಬಕ್ಕೆ ಒದಗಿಸಬೇಕು ಎಂದು ಇಳಕಲ್ ತಾಲೂಕಾ ರೈತ ಸಂಘದ
ಕಾರ್ಯಾಧ್ಯಕ್ಷ ಗುರು ಗಾಣಿಗೇರ, ಹುನಗುಂದ ತಾಲೂಕಾ ಅಧ್ಯಕ್ಷ ಬಸನಗೌಡ ಪೈಲ್ ಆಗ್ರಹಿಸಿದ್ದಾರೆ.