District Nodal Officer ಮಕ್ಕಳ ಪ್ರತಿಭೆ ಒರೆಗೆ ಹಚ್ಚಲು : ಜಿಲ್ಲಾ ನೋಡಲ್ ಅಧಿಕಾರಿ ನೀಲಮ್ಮ ತೆಗ್ಗಿನಮಠ ಕರೆ
ಇಳಕಲ್ : ನನ್ನ ವೃತ್ತಿ ನನ್ನ ಅಯ್ಕೆ ವಿಷಯವು ಮಕ್ಕಳ ಪ್ರತಿಭೆಯನ್ನು ಒರೆಗೆ ಹಚ್ಚಲಿ ಒಂದು ಒಳ್ಳೆಯ ಪ್ರಯತ್ನವಾಗಿದೆ ಎಂದು ಜಿಲ್ಲಾ ನೋಡಲ್ ಅಧಿಕಾರಿ ನೀಲಮ್ಮ ತೆಗ್ಗಿನಮಠ ಹೇಳಿದರು.
ಇಲ್ಲಿನ ಬಾಲಕಿಯರ ಸರಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರಿನ ಅನಾಯತ ಯುನೈಟೆಡ್ ಎಫ??೯ ಫೌಂಡೇಶನ್ ವತಿಯಿಂದ ನಡೆದ ನನ್ನ ವೃತ್ತಿ ನನ್ನ ಆಯ್ಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಹೊಸ ಶಿಕ್ಷಣ ನೀತಿಯ ಪ್ರಕಾರ ಕೌಶಲ್ಯಗಳ ಕುರಿತು ವೃತ್ತಿ ಯೋಜನೆಯನ್ನು ಶಾಲಾ ಕಾಲೇಜು ಸಮಯದಲ್ಲಿಯೇ ಮಹಿಳೆಯರಿಗೆ ತಿಳಿಸಿಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡಿಸಿಕೊಂಡು ವೃತ್ತಿಪರರಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರು ಅನಾಯತ ಸಂಸ್ಥೆಯ ವಿಭಾಗೀಯ ಮುಖ್ಯಸ್ಥ ಬಿ ಎಂ ಅನಿಲಕುಮಾರ ಮಾತನಾಡಿ ರಾಜ್ಯಾದ್ಯಂತ ಆಯ್ದ ೧೫೦ ಶಾಲೆಗಳಲ್ಲಿ ಇದರ ಅನುಷ್ಠಾನವನ್ನು ಪ್ರಾಯೋಗಿಕವಾಗಿ ಮಾಡಲಾಗಿದ್ದು ಅದರಲ್ಲಿ ಈ ಎರಡೂ ಶಾಲೆ ಕಾಲೇಜುಗಳು ಸೇರಿವೆ ವಿದ್ಯಾರ್ಥಿನಿಯರು ಇದರ ಸದ್ಬಳಕೆ ಮಾಡಿಕೊಳ್ಳಲಿ ಎಂದು ಹಾರೈಸಿದರು.
ಬಾಲಕಿಯರ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಿಕಾರ್ಜುನ ಗೋಟುರ ಮಾತನಾಡಿ ನಮ್ಮ ಶಾಲೆಯನ್ನು ಈ ಯೋಜನೆಯಲ್ಲಿ ಆಯ್ಕೆ ಮಾಡಿದ ಮುಖ್ಯಸ್ಥರಿಗೆ ಧನ್ಯವಾದಗಳು ಎಂದು ಹೇಳಿದರು. ಸರಸ್ವತಿ ಸ್ವಾಗತಿಸಿ ನಿರೂಪಿಸಿದರು,ಮಹೇಶ ಗೋರಿಂಜಾಳ ಪ್ರಾಸ್ತಾವಿಕವಾಗಿ ಮಾತನಾಡಿದರು ಟಿ ಎಂ ತುಂಬದ ವಂದಿಸಿದರು.