Bharatiya Janata Party ಬಾಗಲಕೋಟೆಯಲ್ಲಿ ನಾಳೆ ಭಾರತೀಯ ಜನತಾ ಪಾರ್ಟಿಯಿಂದ ಬೆಲೆ ಏರಿಕೆ,ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ ವಿರುದ್ಧ ಜನಾಕ್ರೋಶ ಯಾತ್ರೆ.
ನಾಳೆ ಗುರುವಾರ ೧೭/೦೪/೨೦೨೫೦ ಗುರುವಾರದಂದು ಭಾರತಿಯ ಜನತಾ ಪಾರ್ಟಿ ಬಾಗಲಕೋಟೆ ಜಿಲ್ಲಾ ವತಿಯಿಂದ ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಬಾಗಲಕೋಟೆ ನಗರದ ಡಾ! ಬಾಬಾಸಾಹೇಬ ಅಂಬೇಡ್ಕರ್ ೭ಸರ್ಕಲ್ ನಿಂದ ಜನಾಕ್ರೋಶ ಯಾತ್ರೆ ಶುರುವಾಗುವುದು.. ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಬಿ. ಎಸ್. ವಿಜಯೇಂದ್ರ ಅವರ ಸಾರಥ್ಯದಲ್ಲಿ ಬೃಹತ್ ಜನಾಕ್ರೋಶ ಯಾತ್ರೆ ನಡೆಯಲಿದ್ದು ಪಕ್ಷದ ಹಿರಿಯರು, ಮುಖಂಡರು ಭಾಗವಹಿಸುತ್ತಿದ್ದಾರೆ. ಈ ಜನಾಕ್ರೋಶ ಯಾತ್ರೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಲೋಕಸಭಾ ಸದಸ್ಯರು, ರಾಷ್ಟ್ರೀಯ ಸದಸ್ಯರು, ಶಾಸಕರು,ವಿಧಾನ ಪರಿಷತ್ ಸದಸ್ಯರು,ಶಾಸಕರು, ಮಾಜಿ ವಿಧಾನ ಪರಿಷತ್ ಸದಸ್ಯರು, ಚುನಾಯಿತ ಜನಪ್ರತಿನಿಧಿಗಳು,ಕಾರ್ಯರ್ತರು, ಸೇರಿದಂತೆ ಬೆಲೆ ಏರಿಕೆಗೆ ತುತ್ತಾದ ಜನಸಾಮಾನ್ಯರೂ ಜನಸಾಮಾನ್ಯರೂ ಕೂಡ ಈ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಬೇಕೆಂದು ಭಾರತೀಯ ಜನತಾ ಪಾರ್ಟಿಯ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಶಾಂತಗೌಡ. ಟಿ.ಪಾಟೀಲ ಅವರು ಜಿಲ್ಲೆಯ ಜನತೆಗೆ ಈ ಮೂಲಕ ಮನವಿ ಮಾಡಿದ್ದಾರೆ.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ