Train hits man crossing railway gate: Afiz Saab dies ರೈಲ್ವೆ ಗೇಟ್ ದಾಟುತ್ತಿದ್ದ ವ್ಯಕ್ತಿಗೆ ರೈಲು ಡಿಕ್ಕಿ: ಅಫೀಜ್‌ಸಾಬ್ ಸಾವು

WhatsApp Group Join Now
Telegram Group Join Now
Instagram Group Join Now
Spread the love

Train hits man crossing railway gate: Afiz Saab dies ರೈಲ್ವೆ ಗೇಟ್ ದಾಟುತ್ತಿದ್ದ ವ್ಯಕ್ತಿಗೆ ರೈಲು ಡಿಕ್ಕಿ: ಅಫೀಜ್‌ಸಾಬ್ ಸಾವು

ರೈಲ್ವೆ ಗೇಟ್ ದಾಟುತ್ತಿದ್ದ ವ್ಯಕ್ತಿಗೆ ರೈಲು ಡಿಕ್ಕಿ: ಅಫೀಜ್‌ಸಾಬ್ ಸಾವು

 

ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಗುಳೇದಗುಡ್ಡ ರೈಲು ನಿಲ್ದಾಣದ ರೈಲ್ವೆ ಗೇಟ್ ದಾಟುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.

ರೈಲ್ವೆಯ ನಿವೃತ್ತ ನೌಕರ ಅಫೀಜ್‌ಸಾಬ್ ಖಾಜಿ (೬೫) ಮೃತ ವ್ಯಕ್ತಿ. ಕಿವಿ ಕೇಳದ ಇವರಿಗೆ ರೈಲು ಬಂದ ಸಪ್ಪಳ ಕೇಳದೆ ಈ ಅನಾಹುತ ನಡೆದಿದೆ ಎನ್ನಲಾಗಿದೆ. ಅವರಿಗೆ ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

 


Spread the love

Leave a Comment

error: Content is protected !!