Kanthi Circle traffic problems ಇಳಕಲ್‌ದ ಕಂಠಿ ಸರ್ಕಲ್‌ದಲ್ಲಿ ಅಡ್ಡಾ ದಿಡ್ಡಿ ವಾಹನ ಪಾರ್ಕಿಂಗ್, ಸಂಚಾರಕ್ಕೆ ತೊಂದರೆ
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಹೃದಯ ಭಾಗವಾಗಿರುವ ಕಂಠಿ ಸರ್ಕಲ್‌ದಲ್ಲಿ ಟ್ರಾಫಿಕ್ ಕಿರಿಕಿರಿ ಹೆಚ್ಚಾಗಿದೆ.
ಹೌದು ಕಂಠಿ ಸರ್ಕಲ್‌ದಿಂದ ಹಿಡಿದು ರಿಲಾಯನ್ಸ್ ಮಾಲ್‌ವರೆಗೆ ಬೈಕ್ ಸವಾರರು ಮತ್ತು ನಾಲ್ಕು ಚಕ್ರದ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾ
ದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿ ತಮ್ಮ ಕೆಲಸಗಳಿಗೆ ಹೋಗುತ್ತಾರೆ ಇದ್ದರಿಂದಾಗಿ ಮೊದಲೇ ಕಿರಿದಾದ ರಸ್ತೆಯಾಗಿರುವ ಈ ರಸ್ತೆಗಳಲ್ಲಿ
ಬಸ್‌ಗಳು ಬಂದರೇ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.
ಅದೇ ರೀತಿ ಕಂಠಿ ಸರ್ಕಲ್‌ದಿಂದ ದ್ವಾರಕಾ ಲಾಡ್ಜ್ ಮುಂದೆ ಹೋಗುವ ರಸ್ತೆಯೂ ಕಿರಿದಾಗಿದ್ದು, ಅಲ್ಲಿಯೂ ಸಹ ಬೈಕ್ ಸವಾರರು
ಅಡ್ಡಾ ದಿಡ್ಡಿಯಾಗಿ ಬೈಕ್‌ಗಳನ್ನು ನಿಲ್ಲಿಸಿ ಹೋಗಿ ಬಿಡುತ್ತಾರೆ ನಾಲ್ಕು ಚಕ್ರದ ವಾಹನ ಬಂದರೆ ಸಾಕು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು
ಪೋಲಿಸ್ ಇಲಾಖೆ ಕಂಠಿ ಸರ್ಕಲ್‌ದಲ್ಲಿ ಟ್ರಾಫಿಕ್ ಪೋಲಿಸರನ್ನು ನಿಯೋಜಿಸಿ ಅಡ್ಡಾ ದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವವರ
ಮೇಲೆ ಕಾನೂನು ಕ್ರಮ ಕೈಗೊಂಡು ಟ್ರಾಫಿಕ್ ಸಮಸ್ಯೆ ಉಂಟಾಗದAತೆ ತಡೆಯಬೇಕಾಗಿದೆ.
ವರದಿ : ಭೀಮಣ್ಣ ಗಾಣಿಗೇರ