Road Construction ಅವೈಜ್ಞಾನಿಕ ರಸ್ತೆ ನಿರ್ಮಾಣ : ಕೆರೆಯಂತಾದ ರಸ್ತೆ
ಇಳಕಲ್ : ಇಲ್ಲಿನ ನಗರಸಭೆಯಿಂದ ಗಾಯತ್ರಿ ಫ್ಯಾಕ್ಟರಿಗೆ ಹೋಗುವ ರಸ್ತೆಯ ಮಾರ್ಗಮಧ್ಯದಲ್ಲಿ ಅವೈಜ್ಞಾನಿಕವಾಗಿ
ರಸ್ತೆ ನಿರ್ಮಾಣ ಮಾಡಿದ್ದರಿಂದ ಮಳೆ ನೀರು ನಿಂತು ಸಂಚಾರ ಮಾಡಲು ತೊಂದರೆಯಾಗಿದೆ.
ನಗರಸಭೆಯಿಂದ ಹನಮಸಾಗರ , ಹೂಲಗೇರಿ , ಬಸವಾ ಪ್ಯಾಲೇಸ್, ಫ್ಯಾಕ್ಟರಿ ಶೋರೂಮ್ ವಿಜಯನಗರ,
ಬಸವನಗರಕ್ಕೆ ಹೋಗುವ ಪ್ರಮುಖ ರಸ್ತೆ ಇದಾಗಿದ್ದು ಕೆರೆಯಂತೆ ನಿಂತ ನೀರಿನಿಂದಾಗಿ ಪಾದಚಾರಿಗಳಿಗೆ,
ಬೈಕ್ ಸವಾರರಿಗೆ ಮತ್ತು ವಾಹನ ಚಾಲಕರಿಗೆ ಅತೀವ ತೊಂದರೆ ಆಗಿದೆ ಎಂದು ಹೈದರಾಬಾದ್
ಕರ್ನಾಟಕ ಗಣಿ ಮಾಲಿಕರ ಸಂಘದ ಅಧ್ಯಕ್ಷ ಬಾಲನಗೌಡ ಪಾಟೀಲ ಹೇಳಿದ್ದಾರೆ.