ಇಳಕಲ್ ನಗರದಲ್ಲಿ ವಾಸವಿ ಜಯಂತಿ ಆಚರಣೆ
ಇಳಕಲ್ : ನಗರದ ಆರ್ಯ ವೈಶ್ಯ ಸಮಾಜದ ವತಿಯಿಂದ ಶನಿವಾರದಂದು ಕನ್ನಿಕಾ ಪರಮೇಶ್ವರಿ ವಾಸವಿ ಜಯಂತಿಯನ್ನು ಸಡಗರ ಸಂಭ್ರಮದಿAದ ಶನಿವಾರದಂದು ಆಚರಿಸಲಾಯಿತು.
ಶಂಕರೀ ರಾಮಲಿಂಗ ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವ ದ್ವಾರಕಾ ಲಾಡ್ಜ್ ನಗರಸಭೆ ಹಳೆಯ ಕಾರ್ಯಾಲಯ ,ಗ್ರಾಮಚಾವಡಿ, ಗಾಂಧಿ ಚೌಕ ಮಾರ್ಗವಾಗಿ ಬಜಾರ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತಲುಪಿ ಅಲ್ಲಿ ಪೂಜೆ ಸಲ್ಲಿಸಿ ಮರಳಿ ಅಲ್ಲಿಂದ ಗುಬ್ಬಿಪೇಟೆ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿತು.
ಅಲ್ಲಿ ದೇವಿಗೆ ತೊಟ್ಟಿಲೋತ್ಸವ ಮಾಡಿ ಮಹಾಪೂಜೆ ನಡೆಸಲಾಯಿತು. ನಂತರ ಆಗಮಿಸಿದ ಎಲ್ಲಾ ಭಕ್ತರಿಗೂ ಪ್ರಸಾದ ವಿತರಿಸಲಾಯಿತು.
ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ರತನಕುಮಾರ , ಶ್ರೀನಿವಾಸ ಬೆಂಗಳೂರು, ಕಾರ್ಯದರ್ಶಿ ಜಿ ಬಾಲಗುರುನಾಥಂ, ಸತ್ಯನಾರಾಯಣ ಅರಳಿಹಳ್ಳಿ, ಮುತ್ತುರಾಜ ಬೆಂಗಳೂರು ನರೇಂದ್ರಕುಮಾರ, ,ಸುರೇಶ್ ಬೆಂಗಳೂರು ಸೋಮು ಕೋರಾ ವಿಠೋಬಶೆಟ್ಟಿ ಮುದಗಲ್ಲ, ಕಮಲಹಾಸನ, ಕಲ್ಯಾಣಿ ಕುಮಾರ , ಲಕ್ಷ್ಮೀ ಬೆಂಗಳೂರು, ಸುಬ್ಬರತ್ನಂ , ಲತಾ ಬೆಂಗಳೂರು ಮತ್ತಿತರರು ಭಾಗವಹಿಸಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)