stop lake encroachment ಕೆರೆ ಒತ್ತುವರಿ ತಡೆಯುವಂತೆ ತಹಸೀಲ್ದಾರಗೆ ಮನವಿ ಸಲ್ಲಿಸಿದ ಗ್ರಾಮಸ್ಥರು
ಇಳಕಲ್ : ತಾಲೂಕಿನ ಸಂಕ್ಲಾಪೂರ ಗ್ರಾಮದಲ್ಲಿನ ಕೆರೆಯ ಪಕ್ಕದಲ್ಲಿನ ಹೊಲವನ್ನು ಖರೀದಿ ಮಾಡಿರುವ ಮಾಲೀಕರ ತಮ್ಮ ಹೊಲದಲ್ಲಿನ ಕಲ್ಲುಗಳನ್ನು ದೊಡ್ಡ ಹಿಟಾಚಿ ಮಷಿನ್ ಬಳಸಿ ಕಲ್ಲುಗಳನ್ನು ಕಿತ್ತಿ ಕೆರೆಗೆ ಹಾಕುತ್ತಿರುವುದನ್ನು ತಡೆಯುವಂತೆ ತಹಸೀಲ್ದಾರ ಅಮರೇಶ ಪಮ್ಮಾರ ಅವರಿಗೆ ಗ್ರಾಮಸ್ಥರು ಮನವಿ ಪತ್ರವನ್ನು ನೀಡಿದರು.
ಇದೇ ಜಮೀನಿಗೆ ಹೊಂದಿಕೊAಡು ಸ.ನಂ.೫ರ ಸರ್ಕಾರಿ ಜಮೀನು ಇದ್ದು ಇದರಲ್ಲಿ ಕೆರೆ ಇರುತ್ತದೆ. ಇವರು ಹೊಲ ಸ್ವಚ್ಛ ಮಾಡುವ ನೆಪದಲ್ಲಿ ಮಗ್ಗಲು ಇದ್ದ ಸರ್ಕಾರಿ ಜಮೀನದ ಕೆರೆಯ ಜಾಗವನ್ನು ಸುಮಾರು ೩೦ ರಿಂದ ೪೦ ಫೂಟಿನವರೆಗೆ ಒತ್ತವರಿ ಮಾಡಿ ಕೆರೆಯಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಿ ಒತ್ತುವರಿ. ಮಾಡಿಕೊಳ್ಳುತ್ತಿದ್ದಾರೆ. ಗ್ರಾಮಸ್ಥರು ಈಗಾಗಲೇ ೩ ಸಲ ಹೋಗಿ ಸಾರ್ವಜನಿಕ ಕೆರೆ ಇದೆ ಒತ್ತುವರಿ ಮಾಡಬೇಡಿ ಎಂದರೆ ಇದು ನಿಮ್ಮ ಜಾಗಾ ಅಲ್ಲಾ ಒತ್ತವರಿ ಮಾಡುವವರೇ, ಕಲ್ಲುಗಳನ್ನು ಕೂಡ ಹಾಕುವವರೇ ನೀವೇನು ಮಾಡಿಕೊಳ್ಳುತ್ತೀರಿ? ಎಂದು ಜನರ ಜೊತೆ ಹೊಡಿ-ಬಡಿ ಮಾತನಾಡುತ್ತಾರೆ.
ಈ ಕೆರೆಯು ಹುನಗುಂದ ಹಾಗೂ ಇಳಕಲ್ಲ ಅವಳಿ ತಾಲೂಕಿನ ೧೦ ಕೆರೆಗಳಿಗೆ ನೀರು ತುಂಬುವ ಕೆರೆ ಯೋಜನೆಯಲ್ಲಿ ಇರುತ್ತದೆ. ಇದಕ್ಕೆ ಆಲಮಟ್ಟಿ ನೀರಿನಿಂದ ಜನ ಜಾನುವಾರು ಪಶು, ಪಕ್ಷಿ. ಕುರಿ ದನಕರುಗಳಿಗೆ ರೈತರ ಬೋರವೆಲ್ಗಳಿಗೆ ಈ ಯೋಜನೆಯಿಂದ ನೀರು ತುಂಬುವ ಪೈಪಿನ ಪಾಯಿಂಟ್ ಸ.ನಂ.೫ ರ ಸರ್ಕಾರಿ ಜಾಗದಲ್ಲಿ ಕೂಡಿಸಿದ್ದು, ಸದರಿ ಪಾಯಿಂಟನ್ನು ದಾಟಿ ಸ.ನಂ.೬ ನ್ನು ಬಿಟ್ಟು ಸ.ನಂ.೫ ‘ರ ಕೆರೆ ಇದ್ದ ಜಾಗವನ್ನು ಒತ್ತುವರಿ ಮಾಡಿದ್ದಾರೆ.
ದಯವಿಟ್ಟು ತಾವು ತಾಲೂಕಾ ದಂಡಾಧಿಕಾರಿಗಳಿದ್ದು, ಗ್ರಾಮದ ಸಾರ್ವಜನಿಕರು ಕೆರೆ ಒತ್ತುವರಿ ಆಗಿದ್ದನ್ನು ನಿಲ್ಲಿಸಬೇಕು ಮತ್ತು ಒತ್ತುವರಿ ಮಾಡಿ ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಿರುವದನ್ನು ತೆರವು ಗೊಳಿಸಬೇಕು. ಕೆರೆ ತುಂಬುವ ಯೋಜನೆಯು ಬೇಸಿಗೆಯ ದಿನಗಳಲ್ಲಿ ಕೂಡಾ ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕು, ತಾವು ಗ್ರಾಮಸ್ಥರ ವಿನಂತಿ ಮೇರೆಗೆ ಸ್ಥಳಕ್ಕೆ ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅವರು ಪರಿಶೀಲಿಸಿದ್ದಾರೆ ತಾವು ಕೂಡ ಸ್ಥಳಕ್ಕೆ ಬಂದು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ಉಗ್ರವಾದ ಹೋರಾಟ ಮಾಡಲಾಗುವದು ಎಂದು ಗ್ರಾಮಸ್ಥರು ಎಚ್ಚರಿಕೆಯನ್ನು ನೀಡಿದರು.






