BJP candidate Gaddigowda ಕಂದಗಲ್ಲ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಪರ
ಕಾರ್ಯಕರ್ತರ ಬಿರುಸಿನ ಪ್ರಚಾರ
ಮೋದಿಯವರು ಪ್ರದಾನಮಂತ್ರಿಯಾದ ನಂತರ ತಮ್ಮ ಅವಧಿಯಲ್ಲಿ ಮಾಡಿರುವ ಜನಪರ ಕಾರ್ಯಗಳನ್ನು ಗ್ರಾಮಸ್ಥರಿಗೆ ತಿಳಿಸುತ್ತಾ ಬಿರು ಬಿಸಿಲನ್ನು ಲೆಕ್ಕಿಸದೇ ಬಿಜೆಪಿ ಕಾರ್ಯಕರ್ತರು ಕಂದಗಲ್ಲ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಲೋಕಸಭಾ ಅಭ್ಯರ್ಥಿ ಗದ್ದಿಗೌಡರ ಪರವಾಗಿ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಅವಳಿ ತಾಲೂಕಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಗಡಿಯಣ್ಣವರ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ೧೦ ವರ್ಷಗಳ ಅವಧಿಯಲ್ಲಿ ಜನರಿಗೆ ಉಪಯೋಗವಾಗುವಂತಹ ಸಾಕಷ್ಟು ಜನಪರಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮತದಾರರಗೆ ಮನವರಿಕೆ ಮಾಡಿಕೊಡುತ್ತಾ ಬಿಜೆಪಿ ಪಕ್ಷಕ್ಕೆ ಮತನೀಡುವಂತೆ ಮತದಾರರಲ್ಲಿ ವಿನಂತಿಪೂರ್ವಕವಾಗಿ ಕೇಳುತ್ತಿದ್ದೇವೆ, ದೇಶದಲ್ಲೇಡೆ ಬಿಜೆಪಿ ಗಾಳಿ ಬೀಸಿದೆ ಮೂರನೇ ಬಾರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ, ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಪಿ ಸಿ ಗದ್ದಿಗೌಡರ ಐದನೇ ಬಾರಿ ಆಯ್ಕೆ ಯಾಗುವ ಮೂಲಕ ಇತಿಹಾಸದ ನಿರ್ಮಿಸಲಿದ್ದಾರೆ ಗದ್ದಿಗೌಡರ ರಿಗೆ ತಮ್ಮ ಅಮೂಲ್ಯ ಮತ ಹಾಕಿ ಬಹುಮತದಿಂದ ಆಯ್ಕೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿ ಕೆ ಫಿ ಎಸ್ ನಿರ್ದೇಶಕರಾದ ಚಂದ್ರಶೇಖರ್ ಕಂಠಿ ಶರಣಯ್ಯಮಠ ಹನಮಂತ ಗೆಜ್ಜಲಗಟ್ಟಿ ಮುಖಂಡರಾದ ವೀರೇಶ್ ಪಾಟೀಲ್,ಕಲ್ಲಪ್ಪ ಶಿವನಗುತ್ತಿ ದೊಡ್ಡಪ್ಪ ಹುಜರತಿ, ಮಲ್ಲಪ್ಪ ಕಾಳಾಪುರ ಬಸವರಾಜ ದಿವಾಣದ ರುದ್ರಗೌಡ ಪಾಟೀಲ್ ಗುರು ಸಜ್ಜನ ಶರಣಪ್ಪ ಚಳಿಗೇರಿ, ಮಂಜುನಾಥ ಮಠ, ಗುಂಡಪ್ಪ ಮುದಗಲ್ಲ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಮತಯಾಚನೆ ಪ್ರಚಾರ ಕಾರ್ಯದಲ್ಲಿ ತೋಡಗಿದ್ದರು.