
Dr. Mallikarjuna Gadiyannavara ವಿಶ್ವ ವಿದ್ಯಾಲಯ ಮುಚ್ಚೋಕೆ ಬಿಡೋಲ್ಲ :ಡಾ ಮಲ್ಲಿಕಾರ್ಜುನ ಗಡಿಯಣ್ಣವರ.
ಇಳಕಲ್ಲ.(ಗ್ರಾ) : ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಬಾಗಲಕೋಟ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಡಾ ಮಲ್ಲಿಕಾರ್ಜುನ ಗಡಿಯಣ್ಣವರು ತೀವ್ರವಾಗಿ ಖಂಡಿಸಿ ಮಾತನಾಡಿ ಅವರು ನಮ್ಮ ದೇಶದ ಪ್ರತಿಯೊಂದು ರಾಜ್ಯದ ಅಭಿವೃದ್ಧಿಯ ಮೂಲ ಬುನಾದಿ ಮಾನವ ಸಂಪನ್ಮೂಲ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸರ್ಕಾರದ ಅವಧಿಯಲ್ಲಿನಮ್ಮ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಒಂದು ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಗಿತ್ತು. ವಿದ್ಯಾಭ್ಯಾಸವನ್ನು ರಾಜ್ಯದ ಮೂಲೇ ಮೂಲೆಗೆ ಕೊಂಡೊಯ್ಯುವ ಮುಖಾಂತರ ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವದು ಇದರ ಸದುದ್ದೇಶವಾಗಿತ್ತು.
ವಿಶೇಷವಾಗಿ ಬಾಗಲಕೋಟೆಯಲ್ಲಿ ಪ್ರಾರಂಭಿಸಲಾಗಿರುವ ತೋಟಗಾರಿಕೆ ವಿಶ್ವವಿದ್ಯಾ ನಿಲಯವನ್ನು ಮುಚ್ಚಲು ಹೊರಟಿರುವುದು ದ್ವೇಷ ರಾಜಕಾರಣಕ್ಕೆ ಉತ್ತಮ ಉದಾಹರಣೆಯಾಗಿದೆ. ಜನ ಹಿತ ಮುಖ್ಯವಾಗಿರುವ ಪ್ರಜಾಪ್ರಭುತ್ವದಲ್ಲಿ ಗ್ರಾಮೀಣ ಭಾಗದ ತೋಟಗಾರಿಕೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಈಗಿನ ಕಾಂಗ್ರೆಸ್ ಸರಕಾರ ವಿದ್ಯಾಲಯ ಮುಚ್ಚಿ ನೋವುಂಟು ಮಾಡಲು ಹೊರಟಿದೆ.ನಮ್ಮ ಹಿಂದಿನ ಬಿ ಜೆ ಪಿ ಸರ್ಕಾರ ಉತ್ತರ ಕರ್ನಾಟಕ ದ ಜನರಿಗೆ ಶಿಕ್ಷಣ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಹಾಗೂ ಉತ್ತೇಜನ ನೀಡಲು ಮತ್ತು ಹೆಚ್ಚಿನ
ಸಂಶೋಧನೆಗಳನ್ನು ನಡೆಸಲು, ರೈತರಿಗೆ ಮಾರ್ಗದರ್ಶನ ನೀಡಲು ಬಡತನದಿಂದ ತೊಂದರೆಗೊಳಗಾಗಿರುವ ರೈತರ ಮಕ್ಕಳಿಗೆ ತಮ್ಮ ಊರಿನ ಹತ್ತಿರ ತೋಟಗಾರಿಕೆ ಶಿಕ್ಷಣ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿತ್ತು, ಆದರೆ ಈ ಎಲ್ಲಾ ವಿಷಯಗಳನ್ನು ರಾಜಕೀಯಗೊಳಿಸಿರುವುದು ದುರಂತವೇ ಸರಿ, ರಾಜ್ಯದ ಆರ್ಥಿಕತೆಯಲ್ಲಿ ಕೃಷಿ ವಲಯವು ಶೇ. ೧೭% ಸಂಪನ್ಮೂಲಗಳನ್ನು
ಒದಗಿಸೀರುತ್ತದೆ. ತೋಟಗಾರಿಕೆ ವಲಯವು ಶೇ. ೧೬% ಸಂಪನ್ಮೂಲವನ್ನು ಒದಗಿಸುತ್ತದೆ.ಕೃಷಿ ಮತ್ತು ಕೃಷಿ ಉಪ ವಲಯಗಳು ಒಟ್ಟಾಗಿ ದೇಶದ ಆರ್ಥಿಕತೆಯನ್ನು ಬಲಗೊಳಿಸುತ್ತವೆ. ೪ ಲಕ್ಷ ಕೋಟಿ ಬಜೆಟ್ ( ಅಯವ್ಯಯ ) ದಲ್ಲಿ ವಿಶ್ವವಿದ್ಯಾನಿಲಯಗಳಿಗೆ ಬೇಕಾಗಿರುವುದು ೩೭೬ ಕೋಟಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಸರ್ಕಾರ ಮಾಡಿರುವ ಕೆಲಸಗಳಿಗೆ ತಡೆಹೋಡ್ಡುವ ನಿರ್ಧಾರವನ್ನು ತೆಗೆದುಕೊಂಡಿರುವುದು ಪ್ರಜಾಪ್ರಭುತ್ವದ ದುರಂತ.
ರಾಜ್ಯ ಸರ್ಕಾರದ ಆದ್ಯತೆ ವಲಯ ಯಾವುದು ಎಂಬುದನ್ನು ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕದ ಜನರಿಗೆ ತಿಳಿಸಬೇಕಾಗಿದೆ . ಇದೇ ರೀತಿ ರೈತ ವಿರೋಧಿ ನೀತಿಯನ್ನು ಮುಂದುವರಿಸಿದರೆ ರಾಜ್ಯಾದ್ಯಂತ ಎಲ್ಲಾ ಹಂತದ ರೈತ ಮೋರ್ಚಾದ ಪದಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಹಾಗೂ ಮಂತ್ರಿಗಳಿಗೆ ಕರ್ನಾಟಕ ರಾಜ್ಯದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಮತ್ತು ಉತ್ತರ ಕರ್ನಾಟಕ ಭಾಗದ ಸಚಿವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಗಡಿಯಣ್ಣವರ ಹೇಳಿದ್ದಾರೆ.