Vishwakarma Jayantyotsava ಸಂಭ್ರಮದಿಂದ ಜರುಗಿದ ವಿಶ್ವಕರ್ಮ ಜಯಂತ್ಯೋತ್ಸವ
ಇಳಕಲ್ : ನಗರದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ನಗರದ ಮಾರ್ಕಂಡೇಶ್ವರ ಶಾಲೆಯ ಹತ್ತಿರದ ವಿಶ್ವಕರ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು
ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.
ನಂತರ ಮಧ್ಯಾಹ್ನ ೬೦ ಕ್ಕೂ ಹೆಚ್ಚು ಕಳಸ ಹಾಗೂ ಭಾವಚಿತ್ರದ
ಮೆರವಣಿಗೆ ಆರಂಭವಾಗಿ ಪೋಲಿಸ್ ಗ್ರೌಂಡ್, ಬನ್ನಿಕಟ್ಟಿ, ಪಶು ಆಸ್ಪತ್ರೆ, ಕೊಪ್ಪರದ ಪೇಟೆ, ಬಜಾರ ಬಸವನಗುಡಿ,
ಗಾಂಧಿ ಚೌಕ , ಗ್ರಾಮ ಚಾವಡಿ, ದ್ವಾರಕಾ ಲಾಡ್ಜ್, ಕಂಠಿ ಸರ್ಕಲ್, ನಗರಸಭೆ ಕಾರ್ಯಾಲಯ, ಮಹಾಂತೇಶ ಚಿತ್ರಮಂದಿರ
ಮಾರ್ಗವಾಗಿ ಮರಳಿ ದೇವಸ್ಥಾನವನ್ನು ತಲುಪಿತು.
ಶಾಸಕ ವಿಜಯಾನಂದ ಕಾಶಪ್ಪನವರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ
ಶಹರ್ ಪೋಲಿಸ್ ಠಾಣೆಯ ಪಿಎಸ್‌ಐ ಎಸ್.ಆರ್.ನಾಯಕ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಿ ಗೌರವ ಸಲ್ಲಿಸಿದರು.
ಮೆರವಣಿಗೆಯಲ್ಲಿ ಡೊಳ್ಳು ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಿತು.
ಮೆರವಣಿಗೆಯ ನೇತೃತ್ವವನ್ನು ಸಮಾಜದ ಹಿರಿಯರು ಮುಖಂಡರು ಯುವಕರು ಪಾಲ್ಗೊಂಡಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)