Karave dharani ಕರವೇ ಧರಣಿ ಸ್ಥಳಕ್ಕೆ ಬಾಗಲಕೋಟ ಎಸಿ ಭೇಟಿ : ತಾತ್ಕಾಲಿಕವಾಗಿ ಧರಣಿ ನಿಲುಗಡೆ
ಇಳಕಲ್ : ಗ್ರಾನೈಟ್ ಶೋರೂಮ್ ವಿರುದ್ಧ ಕರವೇ ಪದಾಧಿಕಾರಿಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು
ಬಾಗಲಕೋಟ ಉಪವಿಭಾಧಿಕಾರಿ ಸಂತೋಷ ಜಗಲಾಸರ ಮಾತಿನ ಮೇರೆಗೆ ತಾತ್ಕಾಲಿಕ ನಾಲ್ಕು ದಿನಗಳ ಕಾಲ ನಿಲುಗಡೆ
ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಮಹಾಂತೇಶ ವಂಕಲಕುAಟಿ ಹೇಳಿದರು.
ಬಾಗಲಕೋಟೆಯಿಂದ ಬಂದ ಉಪವಿಭಾಗಾಧಿಕಾರಿಗಳು ಕರವೇ ಪದಾಧಿಕಾರಿಗಳು ಹೇಳಿದ ಸಮಸ್ಯೆಗಳನ್ನು ಆಲಿಸಿ
ಅವುಗಳನ್ನು ನಾಲ್ಕು ದಿನಗಳಲ್ಲಿ ಈಡೇರಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದ್ದರಿಂದ ನಾಲ್ಕು ದಿನಗಳ ಕಾಲ ನಿಲ್ಲಿಸಲಾಗಿದೆ
ಒಂದು ವೇಳೆ ಬೇಡಿಕೆ ಈಡೇರದೇ ಹೋದಲ್ಲಿ ನಾಲ್ಕು ದಿನಗಳ ನಂತರ ಅಮರಣ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗುವದು
ಎಂದು ಕರವೇ ತಾಲೂಕು ಅಧ್ಯಕ್ಷ ಮಹಾಂತೇಶ ವಂಕಲಕುAಟಿ ಹೇಳಿದರು.