ಪೋಲಿಸ್ ಅಧಿಕಾರಿಗಳಿಂದ ಎಚ್ಚರಿಕೆ
ಇಳಕಲ್ : ನಗರದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಕಳ್ಳತನ ಮತ್ತು ಮೊಬೈಲ್ ಹಾಗೂ ಬೈಕ್ ಕಳ್ಳತನ ಬಗ್ಗೆ ಪೋಲಿಸರು ಎಚ್ಚರಿಕೆಯನ್ನು ಸಾರ್ವಜನಿಕವಾಗಿ ನೀಡುತ್ತಿದ್ದಾರೆ.
ಶಹರ್ ಪೋಲಿಸ್ ಠಾಣೆಯ ಪಿಎಸ್ ಐ ಎಸ್ ಆರ್ ನಾಯಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ನಡೆಸಿದ್ದು ಮನೆಯಿಂದ ಹೊರಗೆ ಹೋಗಬೇಕಾದರೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಉತ್ತಮ ಕೀಲಿ ಪತ್ತಾ ಹಾಕಬೇಕು ಮನೆಯ ಸುತ್ತಮುತ್ತಲಿನ ಜನರಲ್ಲಿ ಮನೆಯ ಕಡೆಗೆ ನೋಡಿಕೊಳ್ಳಲು ಹೇಳಬೇಕು ವಾಯುವಿಹಾರ ಹೋಗಬೇಕಾದರೇ ಮೈಮೇಲೆ ಬಂಗಾರದ ಒಡವೆಗಳನ್ನು ಹಾಕಿಕೊಳ್ಳಬಾರದು ಚಿನ್ನದ ಸರ ಅಪಹರಿಸುವ ಜನರು ದಾಳಿ ಮಾಡುತ್ತಾರೆ ಅಂತವರ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಹೇಳಿದ್ದಾರೆ.
ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಿ ಅಂತಹ ಪ್ರಸಂಗ ನಡೆದಾಗ ತಮ್ಮ ಮೊಬೈಲ್ ಗಾಗಲಿ ಇಲ್ಲವೇ ೧೧೨ ಪೋಲಿಸ್ ಸಹಾಯವಾಣಿಗಾಗಲಿ ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ.





