resort and homestay ಹುನಗುಂದ ಪಟ್ಟಣದಲ್ಲಿ,ರೆಸಾರ್ಟ್ ಹಾಗೂ ಹೋಂಸ್ಟೇಗಳ ಮಾಲೀಕರಿಗೆ ಖಡಕ್ ಸೂಚನೆ
ಕೊಪ್ಪಳ ಜಿಲ್ಲೆಯ ಸಾಣಾಪೂರ ಗ್ರಾಮದಲ್ಲಿ ವಿದೇಶಿ ಪ್ರವಾಸಿಗರ ಮೇಲೆ ನಡೆದ ಹಲ್ಲೆ ಮತ್ತು ಅತ್ಯಾಚಾರ ಸುದ್ದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೋಲಿಸ್
ಅಧಿಕಾರಿಗಳು ಬಾಗಲಕೋಟ ಜಿಲ್ಲೆಯ ಹುನಗುಂದ ವೃತ್ತದ ಎಲ್ಲಾ ಹೋಟೆಲ್ ಗಳ,ರೆಸಾರ್ಟ್ ಗಳ ಹಾಗೂ ಹೋಂ ಸ್ಟೇ ಗಳ ಮಾಲೀಕರ ಸಭೆಯನ್ನು
ಮಾರ್ಚ ೧೧ ಸಾಯಂಕಾಲ ೪ ಗಂಟೆಗೆ ನಡೆಸಿದರು.
ಡಿವಾಯ್ಎಸ್ಪಿ ವಿಶ್ವನಾಥ ಕುಲಕರ್ಣಿ ಮಾತನಾಡಿ ವಿದೇಶೀ ಪ್ರವಾಸಿಗರ ಸುರಕ್ಷತೆ ಕುರಿತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸೂಕ್ತ ಸೂಚನೆಗಳನ್ನು
ನೀಡಿ, ಸರ್ಕಾರದ ಸುತ್ತೋಲೆಯ ಪ್ರತಿಗಳನ್ನು ನೀಡಿ ಅದರಲ್ಲಿನ ಎಲ್ಲಾ ಅಂಶಗಳನ್ನು ಪಾಲಿಸುವಂತೆ ಸೂಚಿಸಲಾಯಿತು. ಸಭೆಯಲ್ಲಿ ಸಿಪಿಐ ಸುನೀಲ ಸವದಿ,
ಇಳಕಲ್ ಶಹರ್ ಪೋಲಿಸ್ ಠಾಣೆಯ ಪಿಎಸ್ಐ ಎಸ್.ಆರ್.ನಾಯಕ ಮತ್ತು ಹುನಗುಂದ ಠಾಣೆಯ ಪಿಎಸ್ಐ ಇದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)