Fisherman died ಮೀನು ಹಿಡಿಯಲು ಹೋಗಿದ್ದ : ಮೀನುಗಾರ ಸಾವು
ಬಾಗಲಕೋಟೆ : ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಮೀನು ಹಿಡಿಯಲು ಹೋದ ಮೀನುಗಾರನೊಬ್ಬ ಮೀನಿನ ಬಲಿ ಕಾಲಿಗೆ ಸಿಲುಕಿ ಕೃಷ್ಣಾ ನದಿಯಲ್ಲಿ ಮುಳಗಿ ಸಾವನಪ್ಪಿದ ಘಟನೆ ಶುಕ್ರವಾರ ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.ತಾಲೂಕಿನ ಕುಲಹಳ್ಳಿ ಗ್ರಾಮದ ಬಾವುಸಾಬ ಬಾಗಡೆ(೪೨) ಮೃತ ವ್ಯಕ್ತಿ. ಈತ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಬಾವುಸಾಬ ಎಂದಿನAತೆ ಶುಕ್ರವಾರ ಬೆಳಿಗ್ಗೆ ಸಮೀಪದ ಮಹಿಷವಾಡಗಿ ಸೇತುವೆ ಬಳಿ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಬಲಿ ತೆಗೆಯುವ ವೇಳೆ ಕಾಲಿಗೆ ಸಿಲುಕಿ ನೀರಲ್ಲಿ ಮಳುಗಿ ಸಾವನ್ನಪ್ಪಿದ್ದಾನೆ.ಸುದ್ದಿ ತಿಳಿದ ಅಧಿಕಾರಿಗಳು ಈಜುಗಾರರ ತಂಡ ಹಾಗೂ ಅಗ್ನಿ ಶಾಮಕದಳದ ಸಹಾಯದಿಂದ ಶವಕ್ಕಾಗಿ ಶೋಧ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ತೇರದಾಳ ತಹಶೀಲ್ದಾರ್ ವಿಜಯಕುಮಾರ, ಪಿಎಸ್ಐ ಶಾಂತಾ ಹಳ್ಳಿ, ಸಿಪಿಐ ಸಂಜೀವ ಬಳಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.