Hunagunda Municipality ಹುನಗುಂದ ಪುರಸಭೆ ಅಧ್ಯಕ್ಷೆ – ಉಪಾಧ್ಯಕ್ಷೆ ಸ್ಥಾನಕ್ಕೆ ಯಾರಾಗ್ತಾರೆ ಸಾರಥಿಗಳು ?
ಹುನಗುಂದ: ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು ಎರಡು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು, ಇಬ್ಬರು ಪ್ರಬಲ ಆಕಾಂಕ್ಷಿಗಳಿದ್ದು, ಹೀಗಾಗಿ ಅಧಿಕಾರ ಗದ್ದುಗೆ ಏರಲು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಎರಡು ಸ್ಥಾನಗಳಲ್ಲಿ ಅಭ್ಯರ್ಥಿಗಳ ಗೆದ್ದಿದ್ದು ಮತ್ತು ಅಧ್ಯಕ್ಷ ಸ್ಥಾನವು ಇಬ್ಬರು ಸಾಮಾನ್ಯ ಮಹಿಳೆಗೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ ಅದೃಷ್ಟ ಯಾರಿಗೆ ಎಂಬುದನ್ನು ಕಾದು ನೋಡಬೇಕಾಗಿದೆ.
ಒಟ್ಟು ೨೩ ಸದಸ್ಯ ಬಲದ ಪುರಸಭೆಯಲ್ಲಿ ೧೨ ಕಾಂಗ್ರೆಸ್, ೮ ಬಿಜೆಪಿ ಹಾಗೂ ಮೂವರು ಜೆಡಿಎಸ್ ಸದಸ್ಯರು ಆಯ್ಕೆಗೊಂಡಿದ್ದಾರೆ.
ಆದರೆ ಬಿಜೆಪಿ ಮತ್ತು ಜೆಡಿಎಸ್ ತಲಾ ಒಬ್ಬೊಬ್ಬ ಸದಸ್ಯರು ಕಾಂಗ್ರೆಸ್ ಪಕ್ಷದೊಂದಿಗೆ ಬಹಿರಂಗವಾಗಿಯೇ ಗುರುತಿಸಿಕೊಂಡಿರುವುದರಿAದ ಕಾಂಗ್ರೆಸ್ ಪಕ್ಷದ ಬಲ ೧೪ಕ್ಕೆ ಏರಿಕೆಯಾಗಿದ್ದು, ಬಿಜೆಪಿ- ಕಾಂಗ್ರೆಸ್ಗೆ ಮ್ಯಾಜೀಕ್ ನಂಬರ್ ೧೩ ಬೇಕು. ಕಾಂಗ್ರೆಸ್ ಪಕ್ಷ ಬಹುಮತ ಇರುವದರಿಂದ ಅದೇ ಪಕ್ಷದವರೇ ಉಪಾಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡ ೬ ಮಹಿಳಾ ಸದಸ್ಯರಲ್ಲಿ ಗುರುಬಾಯಿ ಷಣ್ಮುಕಪ್ಪ ಹೂಗಾರ, ಹಾಗೂ ಶಾಂತಮ್ಮ ನೂರಂದಪ್ಪ ಮೇಲಿನಮನಿ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದು,
ಪರಿಶಿಷ್ಟ ಜಾತಿ ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡಿರುವ ಕಮಲವ್ವ ಪರಸಪ್ಪ ಸಂದಿಮನಿ ಮತ್ತು ರಾಜವ್ವ ಹನಮಪ್ಪ ಬದಾಮಿ ಇಬ್ಬರು ಉಪಾಧ್ಯಕ್ಷ ಸ್ಥಾನದ ಪ್ರಭಲ ಉಪಾಧ್ಯಕ್ಷರ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ ಸದಸ್ಯರಾದ ಭಾಗ್ಯಶ್ರೀ ರೇವಡಿ, ನಾಗರತ್ನಾ ತಾಳಿಕೋಟಿ ಅವರು ಹೆಸರು ಬಲವಾಗಿ ಅಧ್ಯಕ್ಷ ಸ್ಥಾನಕ್ಕೆ ಬರುತ್ತಿದ್ದು, ಶಾಸಕ ವಿಜಯಾನಂದ ಕಾಶಪ್ಪನಪ್ಪನವರ
ಕೈಗೊಳ್ಳುವ ನಿರ್ಧಾರವೆ ಅಂತಿಮ. ಹೀಗಾಗಿ ಅವರ ಮೇಲೆ ಪ್ರಭಾವ ಬೀರುವ ಕಾರ್ಯಗಳು ಈಗಾಗಲೇ ಚುರುಕಾಗಿವೆ. ಅಂತಿಮವಾಗಿ ಶಾಸಕ ವಿಜಯಾನಂದ ಕಾಶಪ್ಪನವರ ಅವರ ನಿರ್ಣಾಯದ ಮೇಲೆ ನಿಂತಿದೆ.
* ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದು, ಶಾಸಕ ವಿಜಯಾನಂದ ಕಾಶಪ್ಪನವರಿಗೆ ಅಧ್ಯಕ್ಷರನ್ನಾಗಿ ಮಾಡಿ ಅಂತ ಬೇಡಿಕೆ ಮುಂದಿಟ್ಟಿರುವೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ದನಾಗಿರುತ್ತೇವೆ : ಭಾಗ್ಯಶ್ರೀ ರೇವಡಿ – ಪುರಸಭೆ ಸದಸ್ಯೆ, ಹುನಗುಂದ