Worker electrocuted: ಕಾರ್ಮಿಕನಿಗೆ ತಗುಲಿದ ವಿದ್ಯುತ್ : ಆಸ್ಪತ್ರೆಗೆ ದಾಖಲು
ಇಳಕಲ್ಲ. ಇಲ್ಲಿನ ಬಸ್ ನಿಲ್ದಾಣದ ರಸ್ತೆಯಲ್ಲಿ ಕಟ್ಟುತ್ತಿರುವ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನಿ
ಕಾರ್ಮಿಕನಿಗೆ ವಿದ್ಯುತ್ ತಗುಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾನೈಟ್ ಕಲ್ಲುಗಳನ್ನು ಜೋಡಿಸುವ ಸಮಯದಲ್ಲಿ ಕಾರಣಾಂತರಗಳಿAದ ಪೈಪು ಒಂದನ್ನು ಹಿಡಿದುಕೊಂಡು
ಮೇಲಿನಿಂದ ಕೆಳಗೆ ಇಳಿಯುವಾಗ ಕೈಯಲ್ಲಿ ಇದ್ದ ಸ್ಟೀಲ್ ಪೈಪು ಹೈಟೆನ್ಸ್ ವೈರುಗಳಿಗೆ ತಾಕಿದಾಗ ಕಾರ್ಮಿಕ ೨೬
ವರ್ಷದ ಅಧುರಾಮ ಗೆ ವಿದ್ಯುತ್ ತಗುಲಿ ಕೆಳಗೆ ಬಿದ್ದು ಒದ್ದಾಡ ತೊಡಗಿದ್ದಾನೆ ಕೂಡಲೇ ಜೊತೆಗಿದ್ದ ಕಾರ್ಮಿಕರು
ಮತ್ತು ಸ್ಥಳೀಯರು ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ವಿದ್ಯುತ್ ತಗುಲಿದ್ದರಿಂದ ಆತನಿಗೆ ಫಿಟ್ಸ್ ಬಂದಿದ್ದು ಅಪಾಯಕ್ಕೆ ಸಿಲುಕಿದ್ದಾನೆ ಎಂದು ಹೇಳಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)






