ವಿಶ್ವ ಪರಿಸರ ದಿನ ಆಚರಣೆ
ಹುನಗುಂದ : ತಾಲೂಕಿನ ನಾಗೂರ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸಸಿಗೆ ನೀರೇ ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಡಿಪಿಓ ಗಿರಿ ವೆಂಕಟಪ್ಪ ತಿಮ್ಮಣ್ಣವರ್ ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸಸ್ಯವಾಗಿ ಇಳಿಸಿಕೊಳ್ಳುವುದರ ಮೂಲಕ ಪರಿಸರ ಜಾಗೃತಿಯನ್ನು ಎಲ್ಲರಿಗೂ ತಿಳಿ ಹೇಳಬೇಕಾಗಿ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಆದನಗೌಡ ಹಿರೇಗೌಡರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಬಸವರಾಜ ಭಜಂತ್ರಿ ಎಸ್ ಡಿ ಎಂ ಸಿ ಸದಸ್ಯರಾದ ಮುತ್ತಣ್ಣ ಬಳೆಗಾರ ಮತ್ತು ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ವರದಿ : ಮುತ್ತಣ್ಣ ಬಳೆಗಾರ (ನಾಗೂರ)





