
ಬಲಕುಂದಿ ತಾಂಡಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಇಳಕಲ್ಲ : ಹೊಸದಾಗಿ ಒಂದನೇ ತರಗತಿಗೆ ಶಾಲೆಗೆ ದಾಖಲಾದ ಮಕ್ಕಳಿಂದ ಸಸಿಗೆ ನೀರು ಉಣಿಸುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾ ಶಾಲೆಯಲ್ಲಿ ಆಚರಿಸಲಾಯಿತು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡುವುದರ ಮೂಲಕ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಪಿ ಎಸ್ ಪಮ್ಮಾರ ,ಪ್ರತಿ ಮಕ್ಕಳು ಒಂದೊAದು ಸಸಿ ಮನೆಯ ಮುಂದೆ ಹಾಗೂ ಶಾಲೆಯಲ್ಲಿ ನೆಡುವುದರ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಲು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರಾದ ಜಿ ಕೆ ಮಠ, ಎ ಡಿ ಬಾಗವಾನ , ಪಿ ಎಸ್ ಹೊಸುರು , ಆರ್ ಎಸ್ ಕೊಡಗಲಿ , ಎಂ ಎನ್ ಅರಳಿಕಟ್ಟಿ , ಎಂ ಪಿ ಚೇಗೂರ , ಎಸ್ ಎಲ್ ಜೋಗಿನ , ಎಂ ಎಸ್ ಬೀಳಗಿ , ಎಸ್ ಎಂ ಮಲಗಿಹಾಳ , ಪಿ ಟಿ ಮೇಗಡಿ, ಸಾಯಿರಾ ಹೆರಕಲ್ ಉಪಸ್ಥಿತರಿದ್ದರು.





