ಇಳಕಲ್ಲದ ಎಸ್.ಆರ್.ಕಂಠಿ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ
ಬಾಗಲಕೋಟ: ಜಿಲ್ಲೆಯ ಇಳಕಲ್ಲದ ಎಸ್.ಆರ್.ಕಂಠಿ ಬಾಲಕಿಯರ ಪ್ರೌಢಶಾಲೆಯಲ್ಲಿ “ವಿಶ್ವ ಪರಿಸರ ದಿನ”ವನ್ನು ಸಸಿ ನೆಟ್ಟುವ ಮೂಲಕ ಬುಧವಾರದಂದು ಆಚರಿಸಲಾಯಿತು.
ಮುಖ್ಯಗುರು ಸಂಗಣ್ಣ ಗದ್ದಿ ಮಾತನಾಡಿ ಮಕ್ಕಳು ಪರಿಸರ ಸಂರಕ್ಷಣೆ ನಮ್ಮ ಹಕ್ಕು, ಪರಿಸರ ಕಾಳಜಿ ನಮ್ಮ ಕರ್ತವ್ಯ, ಪರಿಸರ ಉಳಿದರೆ ನಾವು ಉಲಕಿದೇವು, ನಮ್ಮೆಲ್ಲರ ಆರೋಗ್ಯವಂತ ಜೀವನಕ್ಕೆ ಪರಿಸರ ಬಹಳ ಮುಖ್ಯ ಎಂದು ಹೇಳಿದರು.
ಶಾಲೆಯ ವಿದ್ಯಾರ್ಥಿಗಳ ವಿಶ್ವ ಪರಿಸರ ದಿನ ಕುರಿತಂತೆ ನಿಬಂಧನೆಗಳನ್ನು ಎಲ್ಲಾ ವಿದ್ಯಾರ್ಥಿನಿಯರು ಬರೆದುಕೊಂಡು ಬಂದು ಪರಿಸರದ ಮಹತ್ವ ಕುರಿತು ವಿದ್ಯಾರ್ಥಿನಿಯರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)