Accident ಕುಣಿಬೆಂಚಿ ಕ್ರಾಸ್ ಹತ್ತಿರ ವಾಕಿಂಗ್ ಮಾಡುತ್ತಿದ್ದ ಯುವಕನಿಗೆ ಹಿಂಬ್ಬದಿಯಿoದ ಬೈಕ್ ಡಿಕ್ಕಿ : ಯುವಕ ಸಾವು
ಕುಣಿಬೆಂಚಿ ಕ್ರಾಸ್ ಹತ್ತಿರ ವಾಕಿಂಗ್ ಮಾಡುತ್ತಿದ್ದ ಯುವಕನಿಗೆ ಹಿಂಬ್ಬದಿಯಿoದ ಬೈಕ್ ಡಿಕ್ಕಿ : ಯುವಕ ಸಾವು ಬಾಗಲಕೋಟ ಜಿಲ್ಲೆಯ ಅಮೀನಗಡ ಪೋಲಿಸ್ ಠಾಣಾ ವ್ಯಾಪ್ತಿಯ ಕುಣಿಬೆಂಚಿ ಕ್ರಾಸ್ ಹತ್ತಿರ ಸ್ನೇಹಿತರಿಬ್ಬರು ಶನಿವಾರದ ಸಾಯಂಕಾಲದoದು ವಾಕಿಂಗ್ ಮಾಡುತ್ತಿದ್ದ ವೇಳೆ ಹಿಬ್ಬಂದಿಯಿoದ ಬಂದ ಬೈಕ್ ಸವಾರನೊಬ್ಬ ವಾಕಿಂಗ್ ಮಾಡುತ್ತಿದ್ದ ಯುವಕರಿಬ್ಬರಿಗೆ ಡಿಕ್ಕಿಹೊಡೆದಿದ್ದರಿಂದ ತಲೆಗೆ ಬಲವಾದ ಪೆಟ್ಟುಬಿದ್ದು ಓರ್ವ ಯುವಕ ಸಾವನ್ನಪ್ಪಿದ್ದಾನೆ. ಇನ್ನೋರ್ವ ಯುವಕನಿಗೆ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ.
ಮೃತಪಟ್ಟ ವ್ಯಕ್ತಿ ಸೂಳಿಭಾವಿ ಗ್ರಾಮದ ನಾಗರಾಜ ಕತ್ತಿ (೨೮) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅಮೀಗಡ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಮೃತಪಟ್ಟ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.