ಮಕ್ಕಳ ಮೇಲೆ ಪಾಲಕರ ನಿಗಾ ಇರಲಿ : ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ
ಬಾಗಲಕೋಟೆ : ಮಕ್ಕಳು ಶಾಲಾ, ಕಾಲೇಜು ಅವಧಿಯಲ್ಲಿ ಸಮಾನ ವಯಸ್ಕರ ಜೊತೆಗೆ ಮೋಜಿಗಾಗಿ ಈಜಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಸಂಭವಿಸುತ್ತಿರುವ ಬಗ್ಗೆ ವರದಿಯಾಗುತ್ತಿದ್ದು, ಮಕ್ಕಳ ಪಾಲಕರು ಮಕ್ಕಳ ಮೇಲೆ ನಿಗಾವಹಿಸುವಂತೆ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ. ಎಂ ಕೋರಿದ್ದಾರೆ.
ಪಾಲಕರು ತಮ್ಮ ಮಕ್ಕಳನ್ನು ಕೆರೆ, ನದಿ, ನದಿ, ಜಾಕೆವೆಲ್ ಹಾಗೂ ಇತರೆ ನೀರಿನ ಮೂಲಗಳ ಕಡೆಗೆ ಈಜಲು ಬಿಡದೇ ಮನೆಯಲ್ಲಿಯೇ ರಜಾ ಅವಧಿಗಳನ್ನು ಸಂತೋಷದಿAದ ಕಳೆಯುವಂತೆ ನೋಡಿಕೊಳ್ಳಲು ಕೋರಿದ್ದಾರೆ.