Dr. Gurumahantashri ಡಾಕ್ಟರೇಟ್ ಪದವಿ ಪಡೆದ ಡಾ.ಗುರುಮಹಾಂತಶ್ರೀಗಳಿಗೆ ಕುಂಬಾರ ಸಮಾಜದಿಂದ ಸತ್ಕಾರ
ಇಳಕಲ್ಲ : ಇಲ್ಲಿನ ಚಿತ್ತರಗಿ ಶ್ರೀ ವಿಜಯಮಹಾಂತೇಶ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗುರುಮಹಾಂತ ಮಹಾಸ್ವಾಮಿಗಳಿಗೆ ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನ ಲೋಕಭವನದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದರು.
ಈ ಹಿನ್ನೆಲೆಯಲ್ಲಿ ಶ್ರೀ ಸರ್ವಜ್ಞ ಕುಂಬಾರ ಗುಂಡಯ್ಯ ಸೇವಾ ಸಮಿತಿ ಟ್ರಸ್ಟ್ ಪದಾಧಿಕಾರಿಗಳು ಶ್ರೀಮಠಕ್ಕೆ ಆಗಮಿಸಿ ಗುರುಮಹಾಂತಶ್ರೀಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಸತ್ಕರಿಸಿದರು.
ಈ ಸತ್ಕಾರ ಸಮಾರಂಭದಲ್ಲಿ ಶ್ರೀ ಸರ್ವಜ್ಞ ಕುಂಬಾರ ಗುಂಡಯ್ಯ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಬಸವರಾಜ ಕುಂಬಾರ, ರಾಮಣ್ಣ ಐಹೊಳಿ, ನಾಗಪ್ಪ ಸಂಗಮ್, ರುದ್ರಪ್ಪ ಕುಂಬಾರ, ಶಿವಾನಂದ ಕಾಟಾಪೂರ, ಮಂಜುನಾಥ ಚಕ್ರಸಾಲಿ, ಹುಚ್ಚಪ್ಪ ಬೆಳಗಲ್, ಕುಮಾರ ಕುಂಬಾರ, ಬಸವರಾಜ ಗೋಡಿಹಾಳ, ಮಹಾಂತೇಶ ಐಹೋಳಿ, ರಾಮಣ್ಣ ಐಹೊಳಿ, ಶೇಖರಪ್ಪ ಅಡವಿಬಾವಿ, ಪ್ರಶಾಂತ ಚಕ್ರಸಾಲಿ, ಸಂಗಪ್ಪ ಸಂಗಮ್, ಮಂಜುನಾಥ ಬಸವರಾಜ ಕುಂಬಾರ ಮತ್ತು ಸಮಾಜದ ಯುವಕರು ಮತ್ತಿತ್ತರರು ಇದ್ದರು.






