ತುಂಬಿ ತುಳುಕುತ್ತಿರುವ ಕಪಿಲತೀರ್ಥ ಹಾಗೂ ಗುಳೇದಗುಡ್ಡದ ದಿಡಿಗಿನ ಜಲಪಾತಗಳು : ನೋಡಲು ಎರಡು ಕಣ್ಣು ಸಾಲದು !
ಬಾಗಲಕೋಟ ಜಿಲ್ಲೆಯ ಇಳಕಲ್ಲ ಸುತ್ತಮುತ್ತಲಿನ ಭಾಗದಲ್ಲಿ ಸುರಿಯುತ್ತಿರುವ ಉತ್ತಮ ಮಳೆಗೆ ನಗರದ ಸುತ್ತ ಮುತ್ತ ಇರುವ ಜಲಪಾತಗಳು ತುಂಬಿ ತುಳುಕುತ್ತಿವೆ.
ಹೌದು ಇಳಕಲ್ ನಗರದಿಂದ ಕೇವಲ ೧೪ ಕಿಮಿ ದೂರದಲ್ಲಿ ಇರುವ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಕಪಿಲತೀರ್ಥ ಮತ್ತು ಗುಳೇದಗುಡ್ಡದ ದಿಡಿಗಿನ ಜಲಪಾತ ಸದ್ಯ ಸುರಿಯುತ್ತಿರುವ ಭಾರೀ ಮಳೆಗೆ
ಭೋರ್ಗರೆಯುತ್ತಾ ಸುರಿಯುತ್ತಿರುವ ದೃಶ್ಯಗಳನ್ನು ನೋಡಲು ನಗರದ ಯುವ ಜನತೆ ಜಲಪಾತದತ್ತ ಸಾಗುತ್ತಿದ್ದಾರೆ.
ವರದಿ: ಭೀಮಣ್ಣ ಗಾಣಿಗೇರ ಇಳಕಲ್ಲ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ