Ex-MLA Dodna Gowda Patil ಕ್ಷೇತ್ರದಲ್ಲಿ ಕಾಂಗ್ರೆಸ್ ದುರಾಡಳಿತ : ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪ
ಇಳಕಲ್ : ಹುನಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ದುರಾಡಳಿತ ಮೀತಿ ಮೀರಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.
ಬುಧವಾರದಂದು ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಬಾಗಲಕೋಟ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆಯಲಾಗಿದೆ ೨೪*೭ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯ ಅಡಿಯಲ್ಲಿ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ ಬಳಿ ನಿರ್ಮಿಸಲು ಉದ್ದೇಶಿಸಿರುವ ಓವರಹೆಡ್ ಟ್ಯಾಂಕ್ ನಿರ್ಮಿಸದೇ ನಾಲ್ಕೈದು ವಾರ್ಡುಗಳ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಲಾಗಿದೆ ಗುತ್ತಿಗೆದಾರರ ಜೊತೆಗೆ ನಡೆದ ವಿರಸವೇ ಇದಕ್ಕೆ ಮೂಲಕಾರಣವಾಗಿದ್ದು ಸಾರ್ವಜನಿಕ ಹಿತದೃಷ್ಟಿಗಿಂತ ವೈಯಕ್ತಿಕ ಹಿತದೃಷ್ಟಿಯೇ ಅಗಿದೆ ಎಂದು ದೂರಿದರು.
ನವಿಲುತೀರ್ಥ ಆಣೆಕಟ್ಟು ಮೂಲಕ ನೀರನ್ನು ಬಿಡಲಾಗಿದ್ದರೂ ಅದು ಕಮತಗಿ ಸೇತುವೆ ಬಳಿಯೇ ನಿಲ್ಲಿಸಲಾಗಿದೆ ಇದಕ್ಕೆ ಕಾರಣ ಶಾಸಕರ ಸಹೋದರ ದೇವಾನಂದ ಕಾಶಪ್ಪನವರ ಗಂಜಿಹಾಳ ಗ್ರಾಮದ ಬಳಿ ಮರಳು ವ್ಯವಹಾರ ನಡೆಸುತ್ತಿದ್ದು ಅದಕ್ಕೆ ನೀರು ಬರಬಾರದು ಎಂದು ತಡೆ ಹಿಡಿಯಲಾಗಿದೆ ಇದರಿಂದಾಗಿ ಕಬ್ಬು ಬೆಳೆಯುವ ಚಿತ್ತರಗಿ ಭಾಗದ ರೈತರಿಗೆ ಸಾಕಷ್ಟು ಹಾನಿಯಾಗುತ್ತಿದೆ ಇದನ್ನು ಯಾರೂ ನೋಡದೇ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದವರು ಟೀಕಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟ ಮತಕ್ಷೇತ್ರದಿಂದ ಸಂಸದ ಪಿ ಸಿ ಗದ್ದಿಗೌಡರ ಪುನರಾಯ್ಕೆಗೊಳ್ಳುವದು ಶತಸಿದ್ದ ಎಂದು ದೊಡ್ಡನಗೌಡ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಭಾಗದ ಬಿಜೆಪಿ ಅಧ್ಯಕ್ಷ ಮಹಾಂತಗೌಡ ಪಾಟೀಲ ತೊಂಡಿಹಾಳ, ಮಹಾಂತಪ್ಪ ಚೆನ್ನಿ, ಆದಪ್ಪ ಮೇರನಾಳ, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ , ನಾಡಗೌಡ ಉಪಸ್ಥಿತರಿದ್ದರು.