waterfall ಅಬ್ಬಬ್ಬಾ !! ಜನ ಸಾಗರದಿಂದ ತುಂಬಿ ತುಳುಕುತ್ತಿರುವ
ಕಪಿಲತೀರ್ಥ ಹಾಗೂ ದಿಡಗು ಜಲಪಾತ
ಬಾಗಲಕೋಟ ಜಿಲ್ಲೆಯ ಇಳಕಲ್ ಸಮೀಪದ ಕಪಿಲತೀರ್ಥ ಹಾಗೂ ಗುಳೇದಗುಡ್ಡ ದಿಡಗು ಜಲಪಾತ ಜನಸಾಗರದಿಂದ ತುಂಬಿ ತಳುಕುತ್ತಿದೆ.ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಪಾತಗಳು ಹರಿಯುತ್ತಿದ್ದರಿಂದ ಬಿಸಿಲಿನ ಬೇಗೆಯಲ್ಲಿದ್ದ ಜನರು ಜಲಪಾತಗಳತ್ತ ಮುಖ ಮಾಡುತ್ತಿದ್ದಾರೆ.
ಸಣ್ಣಮಕ್ಕಳು ಯುವಕರು ಹಿರಿಯರು ಮಹಿಳೆಯರು ತಮ್ಮ ಕುಟುಂಬಸ್ಥರೊAದಿಗೆ ಹಾಗೂ ಸ್ನೇಹಿತರೊಂದಿಗೆ ಜಲಪಾತಗಳ ಸ್ಥಳಗಳಿಗೆ ಭೇಟಿ ನೀಡಿ ಸೌಂದರ್ಯದ ಸೊಬ್ಬಗನ್ನು ಸವಿಯುತ್ತಾ ನೀರಿನಲ್ಲಿ ಆಟವನ್ನು ಆಡುತ್ತಾ ಸಂಭ್ರಮಿಸುತ್ತಿದ್ದಾರೆ.
ಎರಡು ದಿನ ರಜೆ ಇದ್ದ ಕಾರಣ ಜಲಪಾತಗಳತ್ತ ಸಾಕಷ್ಟು ಜನರು ಕುಟುಂಬಸ್ಥರೊAದಿಗೆ ಆಗಮಿಸಿ ಜಲಪಾತಗಳನ್ನು ನೋಡುತ್ತಾ ರುಚಿ ರುಚಿಯಾದ ಭೋಜನಗಳನ್ನು ಸವಿಯುತ್ತಾ ಸಂಭ್ರಮಿಸುತ್ತಿದ್ದಾರೆ.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)